Wednesday, September 4, 2013

|| ಉಸಿರು ನಮಗೆ ||

ನೀ ಮೀಟಿದೆ ನನ್ನೆದೆಯ ತಂತಿಯ
ಹಾಡಲೆಂದು ಹೃದಯ ಗೀತೆಯ
ನಾಲ್ಕು ಕೋಣೆಯ ಗೋಡೆಯಲ್ಲು
ಅಳಿಸಲಾಗದ ನಿನ್ನ ಕುರುಹಿಗೆ
ರಾಗ ಹಾಕಲು ತಾಳ ತಪ್ಪಿತು
ಲಯವೆ ಇರದ ಬರಡು ಸ್ವರದಲಿ ||

ನಿನ್ನ ಸ್ಪರ್ಷವು ತಂಪು ನೀಡಲು
ಶ್ವಾಸ ನೀ ನನ್ನ ಚೇತನವಾಗಲು
ನಿನ್ನ ಆಶ್ರಯದಿಂದ ಮಾತನಾಡುವೆ
ನಾಡಿಮಿಡಿತವು ನಿಶಬ್ಧವಾದರೆ
ನಿನ್ನ ಒಲವಿನ ಕೊರತೆ ಕಾರಣ
ಪ್ರಾಣನಿಲ್ಲದು ನೀನು ಅಗಲಿದಾಕ್ಷಣ ||

ಬಾನಿನಲಿರಲಿ ಭುವಿಯಲಿರಲಿ 
ಜೀವ ಉಳಿಯಲು ನೀನು ಬೇಕು
ತ್ರಾಣವು ಬದುಕಿನ ಹೋರಾಟಕಾದರೆ
ಬದುಕ ಪಯಣಕೆ ನೀನೆ ಬೇಕು
ಬಳಲಿದ ಸಮಯದಿ ಆಯಾಸ ನೀಗಲು
ಬೀಸುವ ತಂಗಾಳಿಯೆ ಉಸಿರು ನಮಗೆ ||

2 comments:

  1. ಉಸಿರಂತೆಯೇ - ಒಲವೂ ಸಾರ್ವಕಾಲೀನ ಸತ್ಯ.

    ReplyDelete