Thursday, May 16, 2013

|| ಕಾಯುತಿರುವೆ ||

ನೀ ಕದಡಿದ ನೀರಿನಲಿ
ಗಟ್ಟಿಯಾಗಿಹ ಕೆಸರಿನ ಮೇಲೆ
ನೀ ನಡೆದ ದಾರಿಯಲಿ
ಮೂಡಿದ ಹೆಜ್ಜೆ ಗುರುತುಗಳನು
ಹನಿಯಂತೆ ಎದೆಗಿಳಿದು ಅಳಿಸದಿರು
ನಿನ ಬಿಟ್ಟು ಬೇರೇನು ಬೇಡದು
ನನಗಾಗಿ ಹಾಗೆ ಬಿಡು ಗುರುತನಾದರು
ನೆನಪಿನಲೆ ಬದುಕುಳಿಯಲು ||
 
ನೀರು ಇರದ ಬರಗಾಲದಲಿ
ಬೆವರು ಕಣ್ಣೀರು ನಿಲ್ಲದು
ನೀನಿಲ್ಲದ ಬದುಕಿನಲಿ
ನಿನ ನೆನೆಪು ಮರೆಯಾಗದು
ಅಮವಾಸ್ಯೆಯಲಿ ಚಂದ್ರ ಮರೆಯಾದರು
ಪ್ರಥಮದಂದು ಮರಳಿದಂತೆ
ನೀ ತಿರುಗಿ ಬರುವೆಯೆಂದು
ಚಾತಕ ಪಕ್ಷಿಯಂತೆ ಕಾಯುತಿರುವೆ ||

1 comment:

  1. ಕಾಯುತ್ತ ಕುಳಿತ ಶಬರಿ ಅಹಲ್ಯರಲ್ಲಿ ಇದ್ದದ್ದು ಭಕ್ತಿಯ ಜೊತೆಗೆ ಅಪರಿಮಿತ ತಾಳ್ಮೆ. ಸುಂದರವಾಗಿದೆ ನಿರೀಕ್ಷೆಯ ಪದಗಳು

    ReplyDelete