Tuesday, May 21, 2013

|| ಶೃತಿ ಬಂದು ಸೇರಿದಾಗ ||

ಆ ಚಂದ್ರ ಚೂರಾಗಿ
ಆ ಚೂರು ಧರೆಗುರುಳಿ
ಈ ಮೊಗದಲಿ
ಆ ಕಾಂತಿ ಕಂಗೊಳಿಸುತಿಹುದು ||

ಕಲ್ಪನೆಯ ಕುಸುಮವಾಗಿ
ಮುಡಿಯೇರುವ ಮಲ್ಲಿಗೆಯು ನೀ
ಮಲ್ಲಿಗೆಯ ಮಕರಂದದೊಳಗಿನ
ಮಧುವು ನಾನಾಗಿ ನಿನ ಅಂದ ವೃದ್ಧಿಸುವೆ ||

ಮೂಗಿನ ಮೇಲೊಂದು ಕಿವಿಗಳಲ್ಲೆರಡು
ಕಣ್ಣ್ಕಾಂತಿಯಲಿ ಮಿನುಗುತಿರುವ
ಇನ್ನೆರಡು ತಾರೆಗಳು ಕಂಗೊಳಿಸುತಿಹುದು
ರೇಷಿಮೆಯ ಕೇಶಗಳು ಹೊಳೆಯುತಿಹುದು ||

ಜೊತೆಯಲಿ ಹಾಡುವೆನು ರಾಗವನಿಂದು
ಪದಗಳ ಪೋಣಿಸುವ ಕಾರ್ಯ ನನದೆಂದು
ಭಾವವನು ತುಂಬುವೆನು ತಾಳವನು ಹಾಕುವೆನು
ಸುಂದರ ಈ ಜೀವನ ರಾಗ ಶೃತಿ ಬಂದು ಸೇರಿದಾಗ ||

No comments:

Post a Comment