Tuesday, May 28, 2013

|| ನೇತ್ರದಾನ ||


ಜಗವ ನೋಡಲು ನಯನ ಬೇಕು
ಲೋಕ ತಿಳಿಯಲು ಬುದ್ಧೀ ಸಾಕು
ಜಗದ ಕೆಲಸವು ಬುದ್ಧಿಯಿಂದ
ಜಗದ ಚಲನೆಯು ಶಕ್ತಿಯಿಂದ
ಅದನು ನೀ ಅರಿತು
ಅದರಂತೆ ಬದುಕ ಬೇಕು ||

ಬಾಡಿದ ಜೀವಕೆ ಆಸರೆಯಾದರೆ
ಮೆರೆವುದು ನಿನ್ನ ಹಿರಿಮೆಯು
ಮಾಡದ ತಪ್ಪಿಗೆ ಪಡೆದ ಶಿಕ್ಷೆಯು
ಕಾಣದ ಕುರುಡನೆಂಬ ಪಟ್ಟಿಯು
ಅದನು ಅಳಿಸಲು ತೊಡು ದೀಕ್ಷೆಯ
ಮಾಡು ಅನುಕಂಪದ ಸಹಾಯವ ||

ಸತ್ತ ಮೇಲು ಕಾಣ ಬೇಕೆ
ಮಾಡು ಜೀವನದಲಿ ಗುರುತಿಸುವ ದಾನವ
ಮಾಡಿದ ಕೆಲಸವ ನೆನೆಯ ಬೇಕೆ
ಅರಳುವಂತೆ ಮಾಡು ಮುದುಡಿದ ಕುಸುಮವ
ಚಾಚು ನಿನ್ನ ಸಹಾಯ ಹಸ್ತವ
ಅಂಜಿ ಹೆದರದಿರು ಮಾಡಲು ನೇತ್ರದಾನವ ||

1 comment:

  1. ತುಂಬಾ ಒಳ್ಳೆಯ ಕವನ. ನಮ್ಮಿಂದ ಇಬ್ಬರು ನೋಡುವಂತಾದರೆ ಅದೇ ಸಾರ್ಥಕ್ಯ ಭಾವ.

    http://badari-poems.blogspot.in

    ReplyDelete