Saturday, February 8, 2014

|| ಬಾಗುತ ಬದುಕು ||

ಯಾರೊಬ್ಬರಿರರು
ನೀನು ಸೋತಾಗ
ನಾವು ಬಲವೋ
ಜಗವು ಬಲವು

ಊಟದ ಬಾಳೆ ಬದಿಯಲಿ
ಇದ್ದಂಗೆ ಉಪ್ಪಿನಕಾಯಿ
ನೀ ಸಲ್ಪ ತಡೆಯುತ
ತಾಳ್ಮೆಯಿಂದ ಕಾಯಿ

ಜುಳು ಜುಳು ಹರಿಯುತ
ಓಡುವ ನದಿಯಿದು
ಕವಿತೆಯ ಹಾಡುತಿದೆ
ಮನಸಿಗೆ ಮುದವ ನೀಡುತಿದೆ

ಬದುಕ ಬೇಕು
ತಾಳ್ಮೆಯಿಂದ ತಡೆಯುತ
ಹರಿವ ನೀರಂತೆ
ಬಾಗುತ ಬದುಕು ಸಂದರ್ಭಕೆ

2 comments:

  1. ಬದುಕಲ್ಲಿ ಬೇಳೆ ಬೇಯಿಸಿಕೊಳ್ಳುವವರದೇ ಜಮಾನ ಕಣ್ರೀ... ಬಳಸಿಕೊಳ್ಳುತ್ತಾರೆ ನಮ್ಮ!

    ReplyDelete
  2. ಚನ್ನಾಗಿದೆ ಸರ್ ನಿಮ್ಮ ಕವನ

    ReplyDelete