ನಿನ್ನಯ ರೂಪವು
ಕಾಣಲು ಅಪರೂಪವು
ಕಣ್ಣಿನ ಕಾಡಿಗೆ
ಹಾಕಿದೆ ಗೆರೆಯನು
ಬಿಡಿಸುತ ಎಳೆಯನು
ನನ್ನದೆ ರೇಖಾಚಿತ್ರವನು
ಕಣ್ಣಿಗೆ ಕಾಣಲು
ನನ್ನದೆ ಚಿತ್ರವು
ರೆಪ್ಪೆಗಳು ಹಾಕಿವೆ
ಸದ್ದಿಲ್ಲದೆ ಚಪ್ಪಾಳೆಯನು
ಜೊತೆಯಲೆ ಹರಡಿಸಿವೆ
ತುಟಿಗಳು ನಗುವನು
ಕಣ್ಣಿನ ಗುಡ್ಡೆಯು
ದೃಷ್ಠಿಯ ಬೇಳೆಗೆ
ಆಟದ ಮೈದಾನವು
ಸುತ್ತಾಡುವ ದಾರಿಗಳು
ಮುದ್ರಿಸುತ ತಿರುಗಾಡಿವೆ
ಒಲವಿನ ಗೆಳೆಯನಂದವನು
No comments:
Post a Comment