ಸಂಜೆಯಾಗುತಿರಲು
ನಡೆಯುತ ತೀರದಿ
ಮುಳುಗುವ ರವಿಯನು
ನೋಡಿ ರಮಿಸುತಿರಲು
ವಿರಹವೆ ಕಾಡುವ
ವಿಹಾರವೆ ವಿಸ್ಮಯ
ಸಾಗರದ ತುದಿಯಲಿ
ಆ ಬಾನು ಕೂಡಿದೆ
ಬೆಳಗುವ ಭಾನು
ಕಂತಲು ಕಡಲಲಿ
ಕೆಂಪಾದ ಉಂಡೆ
ಕಾಣದು ಇರುಳಲಿ
ತೇಜನಂತೆ ಪ್ರಜ್ವಲಿಸಿದ
ಜೀವವು ಮರೆಯಾಗುವುದು
ಮರುದಿನ ಉದಯಿಸಿ
ಮರುಜನ್ಮವ ದೃಢೀಕರಿಸುವುದು
ಮರಳಿ ಜನಿಸಲೆ ಬೇಕು
ಜೀವನದ ಸಂಕೋಲೆಯಲಿ
ಭಾನುವಿನ ವಿಸ್ಮಯವೇ ಜಗದುಳಿವಿನ ನಿಜ ಆಹಾರ!
ReplyDelete