ಉರಿಯ ನಾಡಿಂದ
ತಂಪು ತವರಿಗೆ
ಮರಳಿ ಬಂದನು ಕರ್ಮಿಗ
ಜೀವ ಲತೆಯಲಿ
ಭಾವ ಬದುಕಲಿ
ಬಾಡಿದಂತೆ ಭಾಸವು
ಕಲ್ಲು ಹೊಡೆಯುತ
ಕೆಲಸ ಅರಸುತ
ಕಾಲಿಬರ್ಡು ತಿರುಗಾಟ ಮಾಡುತ
ಮೇಲೆ ಹತ್ತಲು
ಏಣಿ ಬೇಡುಲು
ಭರವಸೆಯ ಮಾತು ವಾಗ್ಧಾನಿಗಳಲು
ಯಾವ ಸಮಯಕೆ
ಎಲ್ಲಿ ಹೋದರೂ
ಕಾಯುವ ಮಾತೆ ಅಂತಿಮ
ನನಗು ಬರುವುದು
ಒಳ್ಳೆ ಸಮಯವು
ನಿರೀಕ್ಷೆಯೊಂದೆ ಸ್ಪಂದನ
ಏನು ಮಾಡೋದು ಸ್ವಾಮಿ, ನಮ್ಮಂತಹ ಕಾಲಿಬರ್ಡುಗಳ ಹಣೆಬರಹವೇ ಇಂತು. ಕಾಯುವುದು ಕಾಯಕ.
ReplyDelete