Monday, March 25, 2013

|| ನೆನಪಿನಂಗಳ ||


ಕಳೆದ ದಿನಗಳು ಬೇಕು
ಯಾಂತ್ರಿಕತೆಯ ಬದುಕಲಿ
ಎಲ್ಲರ ಮುದ್ಧಿನ ಮಗುವು
ಹಠವನು ಮಾಡಿದರು ಹರುಷವು
ಮರಳದು ಬೇಡಿ ತಪವನುಗೈದರು
ಹಿಂತಿರುಗೆವು ಹಿಂದಿನ ಬಾಲ್ಯಕೆ ||

ಅತ್ತರು ನಕ್ಕರು ತಿನಿಸುವರು
ಚಪ್ಪರಿಸುವ ಬಾಯಿಗೆ ಸಿಹಿಯನು
ಸರ್ವರು ತೋರುವರು ಕಾಳಜಿಯನು
ಬೀಳದಂತೆ ನೋಡುತ ಎಡವಿದರು
ಕಚಗುಳಿಯಿಡುತಲಿ ತುಂಟಾಟ ಮಾಡುತಲಿ
ಹುಚ್ಚುತನದಿ ಕಾಡಿದರು ಸಹಿಸುವರು ||

ಆನೆಯ ಮೇಲೆ ಅಂಬಾರಿ ಮಾಡುತ
ಉಪ್ಪಿನ ಮೂಟೆ ಬೇಕೆಂದು ಕೇಳುತ
ಕಂಬದಾಟದ ಜೊತೆ ಕಣ್ಣಮುಚ್ಚಾಲೆಯು
ಕವಡೆಯಾಟದಲಿ ಕಬಡ್ಡಿ ಜಗಳವು
ಸಾದುಗೋದುವಿನಾಟದ ಹರುಷವು
ಹಾಣೆಯಾಟದಲಿ ಹಂಡಿಯ ಸಹಿಸದ
ಮರಳದು ಜೋಕಾಲಿಯಾಡುವ ಸುಂದರ ದಿನಗಳು ||

ಗುಡ್ಡಗಾಡಿನಲಿ ಗರಗರ ತಿರುಗುತ
ನವಿಲುಗರಿಗಳ ಸಂಗ್ರಹ ಮಾಡುತ
ಜಂಬೆ ಮುಳ್ಳೆ ಹಣ್ಣಿಗೆ ಕಣ್ಣನು ಹಾಕುತ
ಬಿಂಬಲಕಾಯಿ ನೆಲ್ಲಿಕಾಯಿಯ ಕೀಳುತ
ಮಾವು ಹುಣಸೆಗೆ ಕಲ್ಲನು ಹೋಡೆಯುತ
ತೊದಲು ಮಾತಿನಲಿ ಬೈಗುಳ ಬಲುಚಂದ ||

ಚೆನ್ನೆಮನೆ ಆಡುತ ಚದುರಂಗ ಕಲಿಯಲು
ಪಗಡೆಯಾಟದಲಿ ಛಲಗಾರರಾಗಲು
ಮುಟ್ಟು ಆಟದಲಿ ಮುನ್ನುಗ್ಗುವ ವೀರರಾಗಲು
ಸಾಮಾಜಿಕ ಅರಿವಾಗುವುದು ಜನರಲಿ ಬೆರೆಯಲು
ಖುಷಿಯಲಿ ತೇಲುವ ತಲೆಬಿಸಿಯಿಲ್ಲದ ಸಮಯವು
ಬಯಸಿದರು ಬಾರದ ಬಾಲ್ಯದ ನೆನಪಿನಂಗಳ ||

1 comment: