ಗೆಳತಿ ನಿನ್ನ ಬಯಸಿರುವೆ
ಪ್ರೀತಿಗಾಗಿ ಕಾದಿರುವೆ
ನಿನ್ನ ಮುದ್ದು ಮಾತುಗಳು
ನನ್ನ ಮನವ ದೋಚಿಹುದು
ನಿನ್ನ ಮುಖದ ಮುಗ್ಧತೆಯು
ಈ ಎದೆಗೆ ಕನ್ನ ಹಾಕಿಹುವುದು ||
ನಿನ್ನ ಚಿತ್ರ ಕಣ್ಣಿನಲಿ
ಕಾಣದೇನೆ ಮೂಡುವುದು
ನಿನ್ನ ಹೆಸರು ಎದೆಯಲ್ಲಿ
ಹಚ್ಚೆಯನು ಹಾಕಿಹುದು
ನಾನು ಹೇಗೆ ದೂರದಲಿ
ನಿನಗಾಗಿ ಕಾಯುವುದು ||
ನಿನ್ನ ಮುಖವ ನೋಡದೇನೆ
ನಿನಗಾಗಿ ಹಂಬಲಿಸಿಹೆನು
ಪಿಸು ದನಿಯನು ಕೇಳುತಲಿ
ಲೇಖಿಸುವ ಕವಿಯಾಗಿಹೆನು
ಬರೆಯುವೆ ಮನಸಿನ ಪದಗಳನು
ನನ ಭಾವದಲಿ ನೀ ಸ್ವಂತವೆಂದು ||
ಮಾತಿನಲಿ ಮಾಧುರ್ಯ
ದೇಹದಲಿ ಸೌಂದರ್ಯ
ನಿನ ಅಂತರಂಗವನು
ಕೆಡಿಸದೆ ಕಂಗೊಳಿಸುತಿಹುದು
ಅದಕೆ ಸೋತು ಮಾಡುವೆ ಅರಿಕೆ
ನಿನ್ನಯ ಗುಣಕೆ ಮಣಿದೆನು ಕ್ಷಣಕೆ ||
No comments:
Post a Comment