ತಪ್ಪನ್ನು ಮಾಡದ ಜೀವವು ಒಂದು
ಅಪವಾದ ಹೊತ್ತು ನೊಂದಿದೆ ಎಂದು
ಬಿದ್ದಾಗ ಮೊಳಕೊಂದು ಕಲ್ಲೆಸೆಯದೆ
ದೋಷ ಹೊರಿಸಿದವರ ಮೂಲ ತಿಳಿದಾಗ
ಸತ್ಯಾಸತ್ಯತೆ ಅರಿವಿನಲಿ ಬೇಸರಿಸಿದರೆ
ಬಿರುಕು ಮೂಡದ ಗಾಜೆಂದು ಕೂಡದು ||
ನೀರ ಅಲೆಯಲ್ಲಿ ಬೆಳದಿಂಗಳ ಚಂದ್ರನು
ಕಡಿದಂತೆ ಚೂರು ಚೂರಾಗಿ ಕಂಡರೂ
ಸಂಯಮದಲಿ ತಲೆಎತ್ತಿ ನೋಡಿದರೆ
ನಗುತಿರುವನು ಬಾನಿನಲಿ ಶಶಿ ಎಂದಿವಂತೆ
ಮುಂಗೂಪದಲಿ ಮೂಗನ್ನು ಕೊಯ್ದಿಹೆಯೆಂದು
ಮರಳದು ನೋವಿನಲಿ ನೊಂದಿಹೆಯೆಂದು ||
ಕೈಯಲಿ ಹಿಡಿದಿರುವೆ ಮೆಲ್ಲಿಗೆ ಹೂವು
ನಾಸಿಕದಲಿ ತುಂಬಿರುವುದು ದುರ್ಗಂಧವು
ವಾಸನೆಯ ಸ್ವಾದ ಕೆಟ್ಟದಾಗಿದೆಯೆಂದು
ಮಲ್ಲಿಗೆಯನು ಬೈದರೆ ಗಂಧ ಸರಿಯಾಗದು
ಪರಾಂಬರಿಸಿ ನೋಡು ಹೂವಿಗೆ ತಾಕಿರುವುದು ಕಲ್ಮಷವು ||
ಆಕಳು ಕಪ್ಪೆಂದು ಹಾಲು ಕಪ್ಪಾಗದು
ಗಿಡದಲಿ ಅರಳಿದ ಹೂವು
ದೇವನ ತಲೆಯಲಿ ನಗುವುದು
ಮಣ್ನಿನೊಂದಿಗೆ ಬೆರಿತಿದೆಯೆಂದರೇನಂತೆ
ತೊಳೆದಾಗ ತಿಳಿವುದು ಹೊಳೆವ ಚಿನ್ನವೆಂದು
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ||
ಗುರಿ
No comments:
Post a Comment