ಹಾಡುತ ಹೃದಯದ
ಗೀತೆ
ಬರೆಯುತ ಒಲವಿನ
ಕವಿತೆ
ನೋಡಿದ ಕ್ಷಣದಲಿ
ಮನವು
ರಮಿಸುತ ಬಯಸಿದೆ
ಮಡಿಲನು
ಸಾಹಿತಿ ಮಾಡಿತು
ನನ್ನನು ||
ನಿನ್ನ ರೂಪ
ಬಣ್ಣಿಸಲು
ಬರೆವೆನೆಂದು ಕವನವ
ಪಲ್ಲವಿಯೆ ಇಲ್ಲದ
ಚರಣವ
ಗಾನಸುಧೆಯ ಹರಿಸಲೆಂದು
ಕಲಿವೆ ಶಾಸ್ತ್ರೀಯ
ಸಂಗೀತವ ||
ಛಾಯಾಚಿತ್ರ ಬಿಡಿಸುತ
ಶಿಲ್ಪಿಯಾಗ ಬಯಸುತ
ಹರಿದೆ ನೂರು
ಹಾಳೆಯ
ವರ್ಣಿಸಲಾಗದ ನಿನ್ನಯ
ಸೊಬಗನು
ಕಣ್ತುಂಬ ನೋಡಲು
ಬಲು ಸೊಗಸು
||
No comments:
Post a Comment