ತೊರೆದು ಹೊರಗೆ ಬಂದ
ಮೇಲೆ
ಮನವ ಉರಿಸಲು ಹೃದಯದ
ಒಲೆ
ಹಳೆಯ ನೋವನು ಮರೆಸುತ
ಹೊಸ ಹಾವಳಿಯಲಿ ಬೆರೆಸುತ
ದೋಸೆಯಲಿ ತೂತು ಸಹಜ
ಬದುಕಿನಲಿ ಬವಣೆ ನೈಜ
ಎಂಬ ಸತ್ಯವ ಅರುಹುವುದು
||
ಸುಖದ ಸೀಮೆಯಲಿ ಬಾಳುವ
ಕನಸ ಕಾಣುತ ಕಂಪಿಸಿ
ಸಾಧನೆಯ ದಾರಿಯಲಿ ಸಾಗುವ
ಜೀವಿಗೊಂದು ಗುರಿಯನಿರಿಸಿ
ಅದನು ತಲುಪುವ ಕಿಚ್ಚನಿಟ್ಟು
ಶ್ರಮಿಸಿ ಬದುಕ ಸವೆಸಲು
ವಿಧಿಯು ಹಾಕುವ ಸವಾಲು
||
ಮುಂದಿನ ದಿನಗಳಲಿ ನೆಮ್ಮದಿಯನು
ಕಾಣುವ ಕಲ್ಪನೆಯಲಿ ಜೀವನವು
ಕಾರ್ಪಣ್ಯದ ಘಳಿಗೆಯನು ಗವಿದು
ಸಂತೋಷ ಸಂಪರ್ಕಿಸುವ ಸೊಗಡು
ಹಲವಾರು ಬಯಕೆ ಎದೆಯಲಿರಲು
ಸಫಲತೆಯ ಸಿದ್ಧಿಗಾಗಿ ಏಳಿಗೆಯನು
ಇಛ್ಛಿಸುವುದೇ ಮನದ ಮಿಡಿತವು
||
No comments:
Post a Comment