ಮನಸೆ ಮಾಯವಾಯ್ತು
ಕನಸೆ ಕಾಣೆಯಾಯ್ತು
ಕವನ ಹೇಳುವಾಗ
ಅವಳ ಸನಿಹ ಬಯಸಿ
ಪದವು ಪದ್ಯವಾಗಿ
ಗುರಿಯೇ ಇಲ್ಲದ ಸಾಧನೆಯಾಯ್ತು ||
ಉರಿಯುವ ಸೂರ್ಯನು ಅವಕೃಪೆ ಬೀರಿದ
ಕಣ್ಮರೆ ಮಾಡಿದ ಕನಸನು
ಮರೆಯಾಗಿರಿಸಿದ ಮನಸನು
ಅಸೂಹೆಗೊಂಡನು ನಿನ್ನನು ನೋಡಲು
ಬೆಳಗುವ ಕ್ಷಣದಲಿ ಚಂದಿರನು
ಬೇಸರದಿಂದ ಕಣ್ಮರೆಯಾಗಲು
ಕತ್ತಲು ತುಂಬಿತು ಜಗಕೆಲ್ಲ ||
ಕರ್ಕಶವಾದ ಶಬ್ಧವೇ ಆದರು
ಮಧುರ ಪದವನು ನುಡಿದಂತೆ
ನಿನ್ನಯ ಗಾನವ ಆಲಿಸಲು
ಉಳಿದ ಮಾತುಗಳು ಗೌಣವು
ಹಕ್ಕಿಯ ಇಂಚರ ಕೇಳಿದರು
ನಿನ್ನಯ ಧ್ವನಿಯಲಿ ಕರೆದಂತೆ
ಮಿತಿಯೇ ಇಲ್ಲದ ಪ್ರೇಮಿಯ ಊಹೆ ||
No comments:
Post a Comment