ಆ ಚಂದಿರ
ನಗುತ ಬಂದಿರಲು
ತಂಪು ಬೆಳದಿಂಗಳನು
ತಂದಿರಲು
ನುಡಿವ ಮಾತುಗಳೆಲ್ಲ
ಮಣಿ ಮುತ್ತುಗಳು
ಉದುರುವ ಹಾಗೆ
ನೀ ಬೆಳೆದು
ನಿಂತಿಹೆ
ಆ ದಿನವು
ಬಂದಿದೆ
ಎದೆ ತುಂಬಿ
ಮಾಡುವೆನು
ಜನುಮ ದಿನದ
ಶುಭಹಾರೈಕೆಯನು ||
ನೀ ನಡೆವ
ದಾರಿಯಲಿ
ಮೆತ್ತನೆಯ ಹೂ
ತುಂಬಿರಲಿ
ಮೊಣಚಾದ ಮುಳ್ಳುಗಳು
ಚುಚ್ಚುವುದ ಬಿಟ್ಟರಲಿ
ಅಣಿಯಾಗುವ ಕೆಲಸದಲಿ
ಶುಭ ಘಳಿಗೆ
ನಿನದಾಗಲಿ
ಸಿಹಿ ಕಹಿ
ಕ್ಷಣದಲಿ
ಅಪಜಯವು ಅಳಿದಿರಲಿ
||
ಹಾಲ್ನಗೆಯ ಮೊಗದಲಿ
ಕೋಗಿಲೆಯ ಗಾನದಲಿ
ಜಗದಲ್ಲಿ ನಿನ್ನ
ಕುರುಹು
ತುಂಬುತ ಚಿಮ್ಮಿರಲು
ಪ್ರೀತಿವಿಶ್ವಾಸದಿಂದ ಸೆಳೆಯುತ
ಎಲ್ಲರ ಚಿತ್ತವನು
ಕದ್ದಿರುವೆ
ಸರ್ವರು ಸಮಯೋಚಿತವಾಗಿ
ಹರಸುವರು
ಹುಟ್ಟುಹಬ್ಬದ ಶುಭಾಶಯ
ಮಾಡುವರು ||
No comments:
Post a Comment