ಕೋಗಿಲೆಗಾನದ ಮೇರವಣಿಗೆಯ ಗದ್ದಲದಲಿ
ವಸಂತನಾಗಮನವಾಗುತಿಹುದು ಹರುಷವಾಗಲಿ
ಮರದ ಮೇಲೆ ಜೋಡಿಯಾಗಿ ಕುಳಿತ ಗಿಳಿಯನು
ನೋಡೊ ಕಣ್ಣು ನಾಚಿ ಈಗ ಬಯಸಿದೆ ಸಂಗವನು
ಹೇಗೆ ಹೇಳಲಿ ಋತುವಿನಾಗಮನದ ಪರಿಯನು ||
ನವಿಲು ರಮಿಸಿ ಗರಿಯ ಬಿಚ್ಚಿ ನಾಟ್ಯವಾಡಿದೆ
ಜಿಂಕೆಯ ಮರಿಗಳು ಚಿಗುರೆಲೆ ತಿನ್ನುತ
ಓಡುತ ಜಿಗಿಯುವ ಸೊಬಗನು ನೋಡಲು ಚಂದ
ಕುಣಿಯಲು ಬರದ ಮುದ್ದು ರಾಣಿಯ ಕಾಣಲು
ನೆನೆದು ಮನದಲಿ ಚಂದದ ರೂಪ ಮೂಡುವುದು ||
ಶಿಖರದ ತುದಿಯಿಂದ ಜಾರಿದ ನೀರು
ಸಿರಿಯಾಗಿ ಉಕ್ಕುತ ಜಲಪಾತವಾಗಿದೆ
ದುಂಬಿಯೊಂದು ಹೂವ ನಡುವಲಿ ಕುಳಿತು
ಮಕರಂದ ಹೀರುತ ಹಸಿವ ಮರೆಸಿದೆ
ಏನ ನುಡಿಯಲಿ ಪದವು ಇಲ್ಲದೆ ಇಂಥ ಸೊಬಗಲಿ ||
No comments:
Post a Comment