Saturday, October 27, 2012

|| ತುಡಿತ ||

ಕಣ್ಣು ಮುಚ್ಚಿ ತೇಲುವಾಗ
ಅತ್ತ ಇತ್ತ ಹೊರಳುವಾಗ
ಭಾವಿಯೊಳಗಿನ ಕಪ್ಪೆಯಂತೆ
ಒಳಜಗವು ಇಷ್ಟೆ ಎಂದು
ಗರ್ಭದಲಿ ಅಡಗಿಹ ಜೀವಕೆ
ಭುವಿಯ ನೋಡುವಾಸೆಗೆ
ಹೊರಗೆ ಬರುವ ತುಡಿತವು ||

ಜೀವವೊಂದು ಜನಿಸಲು
ಎಲ್ಲರನ್ನು ನೋಡಲು
ಅವರಂತೆ ಆಗುವಾಸೆ
ಕಣ್ಣ ತೆರೆದ ಕೂಡಲೆ
ಭವಣೆಯಲಿ ಸಿಲುಕಲು
ಸುಖಿಯಾಗಿ ಬದುಕಲು
ಬೆಳೆದು ನಿಲ್ಲುವ ತವಕವು ||

ಬದುಕಿನ ಏರಿಳಿತದಲಿ
ಹಾವು ಏಣಿ ಆಟ ಆಡುತ
ತೊಂದರೆಯನು ಎದುರಿಸಿ
ಬಾಳ ಪಯಣದಿ ಬೇಸರಿಸಿ
ನೆಮ್ಮದಿಯನು ಕಾಣ ಬಯಸಿ
ಶಿಶುವಾಗಿ ನಲಿಯುವ ಬಯಕೆಯು
ಇಹ ಲೋಕ ತ್ಯಜಿಸುವ ತುಡಿತವು ||

2 comments: