Friday, October 12, 2012

|| ಅನುದಿನ ಉದಯ ||


ದೂರದಿ ಮೂಡಿದೆ ಕಿರಣವು
ರಶ್ಮಿಯು ಬೆಳಗುತ ಭುವಿಯನು
ಪರಿವಾರಕೆ ಪ್ರಭೆಯನು ಬೀರುತ
ಮೇಲೆ ಬಂದನು ಭಾಸ್ಕರನು
ಶುಭೋದಯದಿ ತಂದನು
ಹೊಸದಿನಕೆ ನವೋಲ್ಲಾಸವನು ||

ಭೂತವಾಗಿಹ ನಿನ್ನೆಯ ನೆನಪುಗಳನು
ಭವಿಷ್ಯವಾಗುವ ನಾಳೆಯ ಕನಸುಗಳನು
ಪಾಡನು ಪ್ರಯೋಗಿಸುತ ವರ್ತಮಾನದಲಿ
ಕಂಡಂತಹ ಕನಸನು ನನಸಾಗಿಸಲು
ಪ್ರತಿದಿನವು ಶ್ರಮಿಸುವ ಪ್ರಾಣಿಗಳು
ಬೆಳಗಿನ ಹೊಸ ಭರವಸೆಯಲಿ ಜೀವಿಗಳು ||

ಮುಂಜಾನೆಯ ಮಬ್ಬಿನಲಿ
ನೂತನ ಜೀವಾಳದಲಿ
ಆಶಾಕಿರಣವು ಮನ ತುಂಬುವುದು
ಗಳಿಕೆಯ ಹುಡುಕುತ ಹೊರಡುವರು
ಜೀವಮಾನದ ಕಾಂತಿಯ ಬಯಕೆಯಲಿ
ನೈಜತೆಯ ಅಭಿನವ ಅನುದಿನ ಉದಯ ||

No comments:

Post a Comment