ಬಾ ಗೆಳತಿ ವಿಹರಿಸುವ ಕೈಯಲ್ಲಿ ಕೈ ಹಿಡಿದು
ಸುಮ್ಮನೆ ಹೀಗೆ ಜೊತೆಯಲ್ಲಿ
ಮುಂಜಾನೆ ಮುಸ್ಸಂಜೆ ಮಳೆಯಲ್ಲಿ ನೆನೆಯೋಣ
ಸುಮ್ಮನೆ ಹಾಗೆ ಜೊತೆಯಲ್ಲಿ....||
ಚಳಿಬಿಟ್ಟು ಕುಣಿಯೋಣ ಖುಷಿಯಲ್ಲಿ ತೇಲೋಣ
ಹೆಜ್ಜೆಯನು ಹಾಕುತ್ತ ಡೊಳ್ಳಿನ ಕುಣಿತಕೆ
ಕಿವಿತುಂಬ ಕೇಳೋಣ ಗೀಗೀಯ ಪದವನ್ನ
ಕಣ್ತುಂಬ ನೋಡೋಣ ಯಕ್ಷಗಾನವನ್ನ
ಸುಮ್ಮನೆ ಹೀಗೆ ಜೊತೆಯಲ್ಲಿ....||
ಸುಗ್ಗೀಯ ಸೊಗಸಲ್ಲಿ ಕಾಮನ ಸುಡುವಾಗ
ಬಣ್ಣವನು ಎರೆಚೋಣ ಕೋಲಾಟ ಆಡುತ್ತ
ನವಿಲಗರಿ ಹೆಕ್ಕೋಣ ನೆಲ್ಲಿ ನೇರಳೆ ಸವಿಯುತ್ತ
ಕಡಲತೀರದಿ ಕೂರೋಣ ಭಾಸ್ಕರನ ಬೀಳ್ಗೊಡುತ
ಸುಮ್ಮನೆ ಹಾಗೆ ಜೊತೆಯಲ್ಲಿ....||
ಮಳೆ ಅಂಬೆ, ಚಳಿ ಅಂಬೆ, ಸುಗ್ಗಿ ಅಂಬೆ, ನೇರಳೆ ಅಂಬೆ.. ಯಾವ ಕಾಲ ಹೇಳೇ ತಿಳೀತಿಲ್ಯಲೋ! ಅಥವಾ ಎಲ್ಲಾ ಕಾಲದಲ್ಲೂ ಒಟ್ಟಿಗಿರನ ಹೇಳ!! ಚೆನ್ನಾಗಿದ್ದು.. Makes me nostalgic :)
ReplyDelete