ನೋಡುವಾಸೆ ಚಂದ್ರನನ್ನು ನಿನ್ನ ಕಣ್ಣಲಿ
ಒಲವ ಧಾರೆ ಸುರಿಸು ಬಾರೆ ನನ್ನ ಮನದಲಿ
ಕಾಣದಂತೆ ಎಲ್ಲಿ ಹೋದೆ ಮಾಯಗುಹೆಯಲಿ
ಬಳಿಗೆಬಂದು ನನ್ನ ಊಳಿಸು ನಿನ್ನ ಜೊತೆಯಲಿ
ನಿನ್ನ ಕುರುಹು ಸಿಗಬಹುದೇ ಮುಸ್ಸಂಜೆ ತಂಗಾಳಿಲಿ
ಕತ್ತಲೆಯ ಸೀಮೆಯಲಿ ಕೊಲ್ಮಿಂಚ ಬೆಳಕಿನಲಿ
ನಿನ್ನ ಮೊಗವ ನಾ ನೋಡಲು
ಶಿಲೆಯಲ್ಲಿ ಬರೆದಿರುವ ಓಲೆಯನು ಕಳಿಸುವೆನು
ನೀ ಹೀಗೆ ಬರಬಾರದೇ...?
ನಿನ್ನ ಕನಸಿನ ಕನಸಲ್ಲೂ ಕನಸಾಗಿ ನಾ ಬರುವೆ
ನನ್ನ ಮನಸಿನ ಮನಸಲ್ಲೂ ಮನಸಾಗಿ ನೀನಿರುವೆ
ನಿನ್ನ ಕಂಪಿನ ಪರಿಸರವು ನನ್ನ ಸುತ್ತ ಇರುವಾಗ
ಉಸಿರಾಡುವ ಈ ಜೀವಕೆ ಹೊಸ ಹುರುಪು ಬಂದಾಗ
ನೀ ಹಾಗೆ ಸಿಗಬಾರದೇ....?
ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ
No comments:
Post a Comment