ಮೊಗ್ಗೊಂದು ಹೂವಾಗಿ ಅರಳುವ ಹಾಗೆ
ನೀನೊಮ್ಮೆ ನಗಬಾರದೆ...?
ಚೈತ್ರದ ಕೋಗಿಲೆಯ ದನಿಯಂತೆ
ನನ್ನ ಹೆಸರನೊಮ್ಮೆ ನೀ ಕೂಗಬಾರದೆ...?
ಉಸಿರಲ್ಲಿ ಬೆರೆತಿರುವ ಒಲವೆಲ್ಲ ಸೇರಿ
ಕಾಣದ ಮೊಗವೊಂದು ನನ್ನ ಕಣ್ಣಲಿ ಸೆರೆಯಾಗಿದೆ....||
ಯಾಕೋ ಕನಸೊಂದು ಕಾಣುವ ವಯಸಿಂದು ಶುರುವಾಯ್ತು
ನಿನ್ನ ಕಂಡ ಕ್ಷಣದಿಂದಲೆ...
ಕಾಣುವ ಕನಸನ್ನು ಕಳೆಯುವ ವಯಸನ್ನು
ತಾಳೆನೋಡಿ ತಿಳಿಯುವೆ ನೀ ಬರುವ ದಿನಗಳನು
ಈ ಹೊತ್ತಲಿ ನಿನ್ನ ಮಡಿಲಲಿ
ಮಂಜಂತೆ ನಾ ಕರಗಿ ನೀರಾಗಲೆ...||
ಮುಂಗಾರು ಎದುರಾಗಬಹುದು
ನಮ್ಮ ಜೋಡಿ ಚಿಗುರೊಡೆಯಲೆಂದು
ನಾ ನೋಡ ಸಿಗಬಹುದೆ ನಿನ್ನ ಮೊಗವ
ಸಿಂಗಾರ ಫಲವಾದ ದಿನದಂದು
ನಿನ್ನ ಹೊತ್ತು ಮೆರೆಯಲೆ ಖುಷಿಯಲ್ಲಿ ನಾನು
ನಮ್ಮ ಹರಸುವ ಶಿವಗಂಗೆಯಂತೆ
ಇನ್ನೆಲ್ಲೂ ಸಿಗದಂತ,ಇನ್ಯಾರು ಕೊಡದಂತ ಒಲವನ್ನ ನೀಡಲೆಂದು
ಕಾಯುತ್ತ ಹೋರಟಿಹುದು ಈ ಜೀವ ನಿನ್ನ ಸೇರಲೆಂದು...||
ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ
No comments:
Post a Comment