Thursday, July 4, 2013

|| ಮುಂಗಾರು ಮಳೆ ||

ನಡೆದಿದೆ ಅನ್ವೇಷಣೆಯ ಹೋರಾಟ
ಬದುಕಿನ ಬೆಳಕಿಗಾಗಿ ಹುಡುಕಾಟ
ಹೊನಲುಬೆಳಕಿನ ಕಾಂತಿಯಲು ಅರಸಿದೆ
ಮುಂಜಾವಿನ ತಿಳಿ ಬೆಳಕಿನಲು ಕಾಣದೆ ||

ವೃದ್ಧಿಸುತ್ತಿವೆ ಪ್ರತಿ ಕ್ಷಣದ ನಿರೀಕ್ಷೆಗಳು
ಬದುಕಲಿ ಬಯಕೆಯ ಭರವಸೆಗಳು
ಚಂಡಾಟದಂತೆ ತಪ್ಪದಿರಲೆಂಬ ತುಡಿತವು
ಆಸೆ ಕೈಗೂಡಲೆಂಬ ಮನಸಿನ ಮಿಡಿತವು ||

ನೀರಿರದ ಮರುಭೂಮಿಯಲಿ ಮಳೆಯಾದಂತೆ
ಬಯಲು ಭೂಮಿಯಲಿ ಕಾಮನಬಿಲ್ಲು ಮೂಡಿದಂತೆ
ಬರಡು ಭೂಮಿಯಲಿ ಹಸಿರು ಚಿಗುರೊಡೆದಂತೆ
ಕಲ್ಪಿಸಿದ ನೀ ಬರಲು ಮುಂಗಾರು ಮಳೆಯಾದಂತೆ ||

Fact...


The Thinking and Expectations will not be perfect as the practical which happen in life... It is the fact.

Wednesday, July 3, 2013

|| ಮುಚ್ಚಿಡ್ಲಾ ||

...ಡ್ರಾಮಾ ಚಿತ್ರದ "ಚಂದುಟಿಯ ಪಕ್ಕದಲಿ" ಹಾಡಿಗೆ ನನ್ನ ಸಾಲುಗಳು...

ಮುಚ್ಚಿಡ್ಲಾ

ತುಸು ಕಂಡು ನಿನ ಮೊಗವ
ನಸು ನಗುತ ಬಂದಿಹನು
ಬೆಳದಿಂಗಳಾರತಿಯ ಬೆಳಗಿಹನು...

ಈ ತಂಪು ನಡುಗೆಂಪು
ಮಲ್ಲಿಗೆಯ ಹೂ ಕಂಪು
ಕೇಳುತಲಿ ಈ ಹಾಡು ಬಲು ಇಂಪು...

ಬಚ್ಚಿಟ್ಟ ಮಾತೊಂದು ಮನಸಲ್ಲಿ
ಬಿಚ್ಚಿಡುವೆ ಅದ ನಿನ್ನ ಎದುರಲ್ಲಿ
ಉಗುಳದಿರು ಹುಚ್ಚುತನ ನನದೆಂದು ||

ಬರೆದಿರುವ ಕವನದಲಿ
ಭಾವ ನಾನಾಗಿರುವೆ
ಅನುಭವಿಸಿ ಹಾಡೆನ್ನ ಮುದನೀಡುವೆ...

ಜೀವನದ ಪಯಣದಲಿ
ದೂರ ನೀ ಹೋಗದಿರು
ಜೊತೆ ನಡೆವ ಸೌಭಾಗ್ಯ ನನದಾಗಲಿ...

ನಯನದಲಿ ನೀರಾಗಿ ಅಡಗಿರ್ಲಾ
ಮಾತಿನಲಿ ಪದವಾಗಿ ಹೊರಬರ್ಲಾ
ನೀ ನನ್ನ ಬದುಕೆಂದು ಹೇಳ್ಬಿಡ್ಲಾ ||

ಆಗಾಗ ಹೇಳುವೆನು
ಕಂಬನಿಯ ಒರೆಸುವೆನು
ನಿನಗಾಗಿ ನಾನಿರುವೆ ಕಾವಲಿಗೆ ಎಂದು...

ಚಳಿಯಲ್ಲು ಬೆವೆತಿಹೆನು
ಮಳೆಯಲ್ಲು ನೆನೆದಿಹೆನು
ಗುಮ್ಮನಾಟದಲಿ ನಾ ಸೋತಿರುವೆನೆಂದು...

ಹಸಿರಿನಲಿ ಹಸೆಮಣೆಯ ಹಾಕಿರ್ಲಾ
ಗರಟೆಯಲಿ ಹಣತೇನ ಹಚ್ಚಿಡ್ಲಾ
ಮುತ್ತಿನಲೆ ಮಾಂಗಲ್ಯ ಕಟ್ಬಿಡ್ಲಾ ||

ಕಟ್ಟಿಟ್ಟ ಕೊಳಲಿನ
ರೂಪದಂತಾಗಿಹೆನು
ಬಿಚ್ಚಿ ನುಡಿಸೆನ್ನನು ಧ್ವನಿಯಾಗಿ ಬರಲಿ...

ಈ ನಿನ್ನ ಜೀವದ
ಉಸಿರು ನಾನಾಗಿರುವೆ
ಮುಖದಲ್ಲಿ ಮೂಗಂತೆ ಎದುರಲ್ಲಿ ಇರ್ಲಾ...

ವಿಶ್ರಾಂತಿ ಇಲ್ದಂಗೆ ಜೊತೆಗಿರ್ಲಾ
ತುದಿಯಲ್ಲಿ ಜೇನಂತ  ಮಾತಾಡ್ಲಾ
ಇದ ಮುಕ್ತಾಯ ಮಾಡದೆ ಮುಚ್ಚಿಡ್ಲಾ ||



Monday, June 24, 2013

|| ನೀರಡಿಕೆ ||

ನಾನಿರುವ ಊರಿನಲಿ ಚಂದ್ರನಿಲ್ಲ
ನೀನಿರುವ ಉರಿನಲಿ ರವಿ ಕಾಣುತಿಲ್ಲ
ಬೆರೆತಾಗಿದೆ ನಾವು ಕವಿ ಕಲ್ಪನೆಯಲಿ
ಒಲವು ಚಿಮ್ಮಿತು ಮುಸ್ಸಂಜೆ ತಂಪಿನಲಿ ||

ತಾರೆ ಮಿನುಗುವುದ ಮರೆತಿಹುದು
ನಿನ ಮೊಗದ ಕಾಂತಿಯಲಿ ಮಂಕಾಗಿಹುದು
ನಾನೋಡದಾಚಂದ್ರ ನಿನ ಹಿಂದೆ ಅಲೆದಿಹನು
ಉರಿ ಕುಂದುವುದೆಂಬ ಭಯದಲಿ ಅಡಗಿ ಬೆಳಗುತಿಹನಾಸೂರ್ಯನು ||

ವಾರಿ ಸುಳಿಯಲಿ ಸಿಲುಕಿದರೂನು
ತೇಲಿ ಬರುವೆನು ನಿನ್ನಯ ಸೆಳೆತಕೆ
ಹೊಳೆಯ ಹನಿಯ ತಂಪಿನಲಿ ಭಾವನೆಗಳು
ಮೂಡಿಸಿವೆ ನಿನ ಅಂದದ ಬಿಂಬಗಳನು ||

ಕರಿಮೋಡ ಮಳೆಯಾಗಿ ಧರೆಗುರುಳಿ
ಬರಡು ಭೂಮಿಯ ಬಾಯಾರಿಕೆ ತಣಿಸಿದಂತೆ
ನನ ಎದೆಯು ಸುಡುತಿದೆ ವಿರಹದ ಬೇಗೆಯಲಿ
ನೀ ಬಂದು ಆರಿಸು ನೀರಡಿಕೆಯ ||

Wednesday, June 19, 2013

|| ಕತ್ತಲು ಕಳೆದಂತೆ ||

ನಂಬಿಕೆ ಬೇಕು ಸಂಬಂಧದಲಿ
ಬರವಸೆ ಇರಬೇಕು ಬದುಕಲಿ
ಬಂತೆಂದು ಕಷ್ಟ ಕೈಕಟ್ಟಿ ಕುಳಿತರೆ
ನೆರವೇರದು ಇಷ್ಟ ಬಾಳಿನಲಿ ||

ಏನಾದರು ಛಲಬಿಡದೆ ಮುನ್ನುಗ್ಗಲು
ಕಾಲ್ಮುರಿದು ಬೀಳುವುದು ಯಶಸ್ಸುಗಳು
ಮುಟ್ಟಿದಾಗ ಮುದುಡುವುದು ನಾಚಿಕೆಮುಳ್ಳು
ಕಲುಕದಿದ್ದಾಗ ನಗುತ ಅರಳುವುದು ಎಲೆಗಳು ||

ಚಾಣದೇಟು ಬಿದ್ದಾಗ ಕಲ್ಲಿನ ಕೆತ್ತನೆ
ಕಂಪಿಸದೆ ನೋಡುವ ಮೂರ್ತಿಗಳ ಬಿತ್ತನೆ
ಅಮವಾಸ್ಯೆಯಂದು ಮಾಯವಾದ ಚಂದಿರನು
ಹುಣ್ಣಿಮೆಯಂದು ಪೂರ್ಣವಾಗಿ  ಕಂಗೊಳಿಸುವನು ||

ಚಳಿಗಾಲದಿ ಎಲೆ ಉದುರಿ ಬೋಳಾದ ಮರಗಳು
ವಸಂತನಾಗಮನಕೆ ಮೈದುಂಬಿ ಸ್ವಾವಗತಿಸುವುದು
ಅರಸು ಆಳಾಗುವುದು, ಆಳು ಅರಸನಾಗುವುದು
ಕಾಲಚಕ್ರ ತಿರುಗಿದಾಗಾಗುವ ಸಹಜ ಕ್ರಿಯೆಗಳು ||

ಬದುಕಲಿ ಬೇಸರ ಕಷ್ಟದ ದಿನಗಳು
ಕಲಿಸುವುದು ಪಾಠವ ಎದುರಿಸಿ ಗಟ್ಟಿಯಾಗಲು
ಮರಳಿಯತ್ನಿಸಿ ಸಾಧಿಸು ನೀ ಹಠಬಿಡದೆ ಕಾರ್ಯವ
ಅಂಜಿ ಹೆದರದಿರು ಬೆಳಕು ಹರಿವುದು ಕತ್ತಲು ಕಳೆದಂತೆ ||

Tuesday, June 18, 2013

|| ಮೈ ಮರೆತಿದೆ ||

ನಿನ ಕನಸಿನ ರಾಗದಲ್ಲಿ
ನನ ಮನಸಿನ ಭಾವ ಬೆರೆಸಿ
ತಲೆಯ ತೂಗೊ ಶೃತಿಯ ನುಡಿಸಿ
ಸಪ್ತಸ್ವರದಿ ಹೃದಯಗೀತೆ ಗಾನವು ||

ನೀ ಹಾಡಿದೆ ಸಂಗೀತದ ಆಲಾಪನೆ ಇಂಪಾಗಿದೆ
ಅದ ಕೇಳಲು ತಂಪಾಗಲು ನನ ಕಲ್ಪನೆ ಸೊಗಸಾಗಿದೆ
ಒಲವಿನ ಗೀತೆಯು ಬರೆಯಲು ಕವಿತೆಯು
ಓದುವ ಮನಸು ಮೈ ಮರೆತಿದೆ ||

Sunday, June 16, 2013

|| ಗುರಿ ಅರಸಿದೆ ||


ನಡೆದ ಹಾದಿಯು ಎಂಥ ಸುಂದರ
ಅರಿವ ಮುಂಚೆಯೆ ಕಳೆದವು
ನಲಿವ ಸಮಯದಿ ನಡೆದ ಹಾದಿಯು
ಮರೆತರೇನು ಚಂದವು ||

ಮನದ ಭಾವವ ಬರೆದು ಅಳಿಸಲಾಗದು
ಎದೆಯ ನೋವ ಪುಟದಲಿ
ಹಳೆಯ ಕ್ಷಣಗಳು ಮಾಸದೆಂದಿಗು
ಮನದ ಅಂಗಳದ ಶಿಲೆಯಲಿ ||

ಈಡೇರದ ಮನದ ಇಂಗಿತವನು
ನೆನೆದಂತೆ ಸಾಕಾರಗೊಳಿಸಲು
ಕವಲು ದಾರಿಯ ಪಯಣಕೆ
ಕವೆಯೇ ಆಧಾರವಾಯ್ತು ||

ಹೊಸ ಹೊಸ ಅನುಭವಗಳು
ಬದುಕಿನ ಪಾಠ ಕಲಿಸಿದೆ
ತ್ರಾಣ ವಿಶ್ರಾಂತಿ ಪಡೆಯಲು
ನಲಿವಿನ ಗುರಿ ಅರಸಿದೆ ||