Wednesday, September 16, 2026

ಗಣಪನ ಲೀಲಾವಳಿ

ಪಾಡುವೆ ಗಣಪನ ಲೀಲಾವಳಿ 

ಕಟ್ಟುವೆ ಎದುರಲಿ ಫಲಾವಳಿ 

ಪೊಗಳುವೆ ನಿನ್ನಯ ಕೀರುತಿಯ

ಮನದಲಿ ಕೂರಿಸಿ ಮೂರುತಿಯ 


ಆದಿ ಪೂಜಿತ ಗಣಪತಿಗೆ 

ಮೆರೆಯುವ ಹಬ್ಬ ಚತುರ್ಥಿಗೆ 

ಕಡುಬು ಕಜ್ಜಾಯ ಕೈಯೊಳಗೆ 

ಪಂಚಕಜ್ಜಾಯ ಭೂಪತಿಗೆ 


ಗಣೇಶನಾದ ನಾಗೋದರ

ವಿದ್ಯಾ ದಾಯಕ ಲಂಬೋದರ

ವಿಘ್ನ ವಿನಾಶಕ ವಿನಾಯಕ

ಕಾರ್ಯ ಫಲಿಸುವ ಪ್ರದಾಯಕ


ಸಿದ್ಧಿ ಬುದ್ಧಿಯ ಪ್ರಿಯತಮಗೆ

ಮೋದಕ ನೀಡುವ ನೈವೇದ್ಯಕೆ

ಸ್ತುತಿಗಳ ಭಜನೆಯು ಪ್ರಥಮನಿಗೆ

ಅಭಯವ ಕರುಣಿಸು ಜನಗಳಿಗೆ


🙏😀❤️ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ❤️😀🙏

ನಿರ್ವಿಘ್ನವಾದ ವಿಶ್ವವು

ನೆಮ್ಮದಿಯ ನಿರುಪದ್ರವಿಗಳ ನೆಲೆಯಾಗುವಂತೆ ಅನುಗ್ರಹಿಸಲಿ. 🙏

ಹಾರಬೇಕು... ಮುಗಿಲ ಮೇಲಕೆ

 ಹಾರಬೇಕು... ಮುಗಿಲ ಮೇಲಕೆ

ನವಿಲಿಂನಂತೆ ಕುಣಿಯಲು 

ದೂರ ಕಾಣುವ... ಚಂದ್ರಲೋಕವು

ಮನೆಗೆ ಹೋಲಿಕೆಯಾಗದು 


ಕಡಲ ಸೇರುವ ತೊರೆಯು ತವಕದಿ 

ಕುಣಿಯಬೇಕು ತುದಿಯಲಿ 

ಸ್ಥಿರದಿ ಅಲೆಯುತ ಉಕ್ಕಿ ನೆಗೆದರು

ಶಶಿಯ ಸೇರದು ತೆರೆಗಳು 


ಬದುಕ ತಿರುವದು ಕಾಣಬಾರದು 

ನೇರ ಸಾಗುವ ರೈಲಿಂನಂತೆ 

ಮನವು ಬಯಸುವ ಇರ್ಶೆ ಹೊಂದಲು 

ಬಳಕೆಗಾಗದು ಯೋಗ್ಯವು

ಬರೆದ ಭಾಷ್ಯವೇ ಶಾಸ್ತ್ರವು

ನೀತಿ ನಿಯಮಕೆ
ಸ್ವಸ್ತ  ಬದುಕಿಗೆ 
ಬರೆದ ಭಾಷ್ಯವೇ ಶಾಸ್ತ್ರವು

ಏಳು ಬೀಳಿನ 
ಬಾಳು ಗೊಳಿನ
ಸೊಕ್ಕು ಅಡಗಲು ಶಾಸ್ತಿಯು

ಏರಿದೇಣಿಯ 
ನೆನೆದು ನಮಿಸಲು 
ಬೆಳಗುತಿರುವುದು ದೀಪವು

ಇಂದು ಅರಸನು 
ನಾಳೆ ಅಗಸನು 
ತಿರುಗುತಿರುವುದು ಕಾಲವು 

ದೀನ ಬೇಡಲು 
ದಾನಿ ನೀಡಲು 
ಒಳಿತಾಗುವುದು ಹರಸಲು 

ತಂದೆ ತಾಯಿಯು 
ಗುರುವೇ ದೇವರು 
ಅತಿಥಿಗಾತಿತ್ಯ ನೀಡಲು 

ಬದುಕು ಸಾಗಲು 
ಸತ್ವ ಸೇರಲು 
ತೂಗೋ ಹೆಸರೇ ಧರ್ಮವು

ಕರ್ಮ ಕೆಳೆಯಲು
ಧರ್ಮ ಉಳಿಯಲು 
ಬೇಕು ಧ್ಯಾನದ ಭಕ್ತಿಯು 

ಹರಿಯು ಜಲದಲಿ 
ಶೇಷ ಶಯನದಿ
ನಡೆಸು ಬದುಕನು ಕೃಪೆಯೆಲಿ 

ಹರನು ಜಗದಲಿ 
ಕುಳಿತು ಗಿರಿಯಲಿ 
ಮುಕ್ತಿ ಕರುಣಿಸು ಕೊನೆಯಲಿ

Saturday, June 6, 2026

ಸಂಗಾತಿ

ಅಭಿಮಾನ ಬೆಳೆಸಿ ಅಭಿನಂದನೆ ತಿಳಿಸಿ 

ಅನುರಾಗ ಬಯಸಿ ಅನುಮೋದನೆ ಗಳಿಸಿ 

ಪ್ರತಿಯ ಕೊಡದ ಪ್ರೀತಿ ನಿಷ್ಠೆ ನಿನಗಾಗಿ ಸಂಗಾತಿ...

ಓ.... ನನ್ನ ಸಂಗಾತಿ...


ಊರೆಲ್ಲಾ ಮಾತು ನಿನ್ನನ್ನೇ ಕುರಿತು 

ಕ್ಯಾಮೆಯನು ಕಲಿತು ಹೆತ್ತವರ ಅರಿತು 

ಭಕ್ತಿಯ ಭಾವಕ್ಕೆ ಸೋತು.... ಶಕ್ತಿ, ಭವಣೆಯನು ಮರೆತು 


ಬದುಕಲ್ಲಿ ಬಂದ ನನ್ನೊಲವ ಚಂದು

ಬಾಳಲ್ಲಿ ಬೆಂದು ಮೋಹದಲಿ ಮಿಂದು 

ಧಾತ್ರಿಲಿ ದೃತಿಗೆ ಸ್ಫೂರ್ತಿ... ಬೆಳಕಿನ್ನು ನಂಜೊತೆಗೆ ಖಾತ್ರಿ