ನಂಬಿಕೆ ಬೇಕು ಸಂಬಂಧದಲಿ
ಬರವಸೆ ಇರಬೇಕು ಬದುಕಲಿ
ಬಂತೆಂದು ಕಷ್ಟ ಕೈಕಟ್ಟಿ ಕುಳಿತರೆ
ನೆರವೇರದು ಇಷ್ಟ ಬಾಳಿನಲಿ ||
ಏನಾದರು ಛಲಬಿಡದೆ ಮುನ್ನುಗ್ಗಲು
ಕಾಲ್ಮುರಿದು ಬೀಳುವುದು ಯಶಸ್ಸುಗಳು
ಮುಟ್ಟಿದಾಗ ಮುದುಡುವುದು ನಾಚಿಕೆಮುಳ್ಳು
ಕಲುಕದಿದ್ದಾಗ ನಗುತ ಅರಳುವುದು ಎಲೆಗಳು ||
ಚಾಣದೇಟು ಬಿದ್ದಾಗ ಕಲ್ಲಿನ ಕೆತ್ತನೆ
ಕಂಪಿಸದೆ ನೋಡುವ ಮೂರ್ತಿಗಳ ಬಿತ್ತನೆ
ಅಮವಾಸ್ಯೆಯಂದು ಮಾಯವಾದ ಚಂದಿರನು
ಹುಣ್ಣಿಮೆಯಂದು ಪೂರ್ಣವಾಗಿ ಕಂಗೊಳಿಸುವನು ||
ಚಳಿಗಾಲದಿ ಎಲೆ ಉದುರಿ ಬೋಳಾದ ಮರಗಳು
ವಸಂತನಾಗಮನಕೆ ಮೈದುಂಬಿ ಸ್ವಾವಗತಿಸುವುದು
ಅರಸು ಆಳಾಗುವುದು, ಆಳು ಅರಸನಾಗುವುದು
ಕಾಲಚಕ್ರ ತಿರುಗಿದಾಗಾಗುವ ಸಹಜ ಕ್ರಿಯೆಗಳು ||
ಬದುಕಲಿ ಬೇಸರ ಕಷ್ಟದ ದಿನಗಳು
ಕಲಿಸುವುದು ಪಾಠವ ಎದುರಿಸಿ ಗಟ್ಟಿಯಾಗಲು
ಮರಳಿಯತ್ನಿಸಿ ಸಾಧಿಸು ನೀ ಹಠಬಿಡದೆ ಕಾರ್ಯವ
ಮರಳಿಯತ್ನಿಸಿ ಸಾಧಿಸು ನೀ ಹಠಬಿಡದೆ ಕಾರ್ಯವ
ಅಂಜಿ ಹೆದರದಿರು ಬೆಳಕು ಹರಿವುದು ಕತ್ತಲು ಕಳೆದಂತೆ ||
ಮನೋ ಕಲ್ಲಿಗೆ ಚಾಣದೇಟು ಬಿದ್ದಾಗ ಕಲ್ಲಿನ ಕೆತ್ತನೆ, ಉತ್ಸಾಹ ತುಂಬು ಕವನ.
ReplyDeleteನಿಜವಾದ ಅನಿಸಿಕೆಗೆ ಧನ್ಯವಾದಗಳು ಬದರಿ ಸರ್.... ಇದು ನನ್ನ ಬದುಕಿನ ವರ್ತಮಾನ... ಆಶಾದಯಕ ಭರವಸೆ ಉತ್ಸಾಹತುಂಬುವುದು.
Deletegood one ( allalli swalpa kavanada shaili tappide ) olle message .. aagadu endu kailagadu endu kai katti kulitare sagadu kelasavu munde !
ReplyDeleteಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.
Delete"ಇರಬೇಕು ಇರಬೇಕು ಅರಿಯದ ತರಹ" ಹಾಡಿನಂತೆ.. ಮಗು ನಡೆವಾಗ ಎಡವಿಬಿದ್ದರು ನಸು ನಗುತ್ತ ಮತ್ತೆ ಪ್ರಯತ್ನ ಮಾಡುತ್ತಲೇ ಇರುತ್ತದೆ. ಸುಂದರ ಸಂದೇಶ ಹೊತ್ತ ಜೋಲು ಬಿದ್ದ ಮನಕ್ಕೆ ಗಾಳಿ ಬೀಸುವ ಸಾಲುಗಳು. ಇಷ್ಟವಾಯಿತು
ReplyDeleteಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.
Delete