ನಾನಿರುವ ಊರಿನಲಿ ಚಂದ್ರನಿಲ್ಲ
ನೀನಿರುವ ಉರಿನಲಿ ರವಿ ಕಾಣುತಿಲ್ಲ
ಬೆರೆತಾಗಿದೆ ನಾವು ಕವಿ ಕಲ್ಪನೆಯಲಿ
ಒಲವು ಚಿಮ್ಮಿತು ಮುಸ್ಸಂಜೆ ತಂಪಿನಲಿ ||
ಆ ತಾರೆ ಮಿನುಗುವುದ ಮರೆತಿಹುದು
ನಿನ ಮೊಗದ ಕಾಂತಿಯಲಿ ಮಂಕಾಗಿಹುದು
ನಾನೋಡದಾಚಂದ್ರ ನಿನ ಹಿಂದೆ ಅಲೆದಿಹನು
ಉರಿ ಕುಂದುವುದೆಂಬ ಭಯದಲಿ ಅಡಗಿ ಬೆಳಗುತಿಹನಾಸೂರ್ಯನು ||
ವಾರಿ ಸುಳಿಯಲಿ ಸಿಲುಕಿದರೂನು
ತೇಲಿ ಬರುವೆನು ನಿನ್ನಯ ಸೆಳೆತಕೆ
ಹೊಳೆಯ ಹನಿಯ ತಂಪಿನಲಿ ಭಾವನೆಗಳು
ಮೂಡಿಸಿವೆ ನಿನ ಅಂದದ ಬಿಂಬಗಳನು ||
ಕರಿಮೋಡ ಮಳೆಯಾಗಿ ಧರೆಗುರುಳಿ
ಬರಡು ಭೂಮಿಯ ಬಾಯಾರಿಕೆ ತಣಿಸಿದಂತೆ
ನನ ಎದೆಯು ಸುಡುತಿದೆ ವಿರಹದ ಬೇಗೆಯಲಿ
ನೀ ಬಂದು ಆರಿಸು ಈ ನೀರಡಿಕೆಯ ||
ಸ್ವಾಗತವೇ ಅಮೋಘವಾಗಿರುವಾಗ, ಬಾರದಿರುವಳೇ ನಲ್ಲೇ?
ReplyDeletehttp://badari-poems.blogspot.in/
ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ
Deleteಸುಂದರ ಪದಗಳ ಮೆರವಣಿಗೆ
ReplyDelete