Tuesday, June 18, 2013

|| ಮೈ ಮರೆತಿದೆ ||

ನಿನ ಕನಸಿನ ರಾಗದಲ್ಲಿ
ನನ ಮನಸಿನ ಭಾವ ಬೆರೆಸಿ
ತಲೆಯ ತೂಗೊ ಶೃತಿಯ ನುಡಿಸಿ
ಸಪ್ತಸ್ವರದಿ ಹೃದಯಗೀತೆ ಗಾನವು ||

ನೀ ಹಾಡಿದೆ ಸಂಗೀತದ ಆಲಾಪನೆ ಇಂಪಾಗಿದೆ
ಅದ ಕೇಳಲು ತಂಪಾಗಲು ನನ ಕಲ್ಪನೆ ಸೊಗಸಾಗಿದೆ
ಒಲವಿನ ಗೀತೆಯು ಬರೆಯಲು ಕವಿತೆಯು
ಓದುವ ಮನಸು ಮೈ ಮರೆತಿದೆ ||

6 comments:

  1. ಇನಿತು ಲವ್ವೀರಲು ಮನದಲ್ಲಿ
    ಲೈಫು ಸರಿಗಮಪದನಿಸ
    ಬರೀ ಆರೋಹಣವೇ ಸದಾ...

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  2. ಮೆರೆಸುವ ಮಾತುಗಳಲ್ಲಿ ಮೈಮರೆಸುವ ಭಾವನೆ ಸೂಪರ್

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  3. ಮೈಮರೆತು ಹೋದವಳಿಗೂ ನಿನ್ನ ಪ್ರೇಮ ಭಾವ ಬೆರಸಿ ನನ್ನೊಳು, ಮೈಮನ ಬಿಸಿ ಏರಿಸಿದೆ, ನಿನ್ನ ನೆನಪಿನಲೇ ನಾ ನಿನ್ನೊಳಗೆ ಕರಗಿ ಬಿಡಲೆ.ಪ್ರತಿ ಭಾವದ ಸಾಲುಗಳು ಅರ್ಥಪೂರ್ಣವಾಗಿವೆ.

    ReplyDelete
  4. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

    ReplyDelete