Saturday, October 6, 2012

...ನಂಬಿಕೆಯಲ್ಲಿ ವೈಮನಸ್ಸು ಮೂಡಿದಾಗ...


ನಂಬಿಕೆಯಲ್ಲಿ ವೈಮನಸ್ಸು ಮೂಡಲು ರಮಿಸುವ ಸಂಬಂಧಗಳು, ಕಾಣದ ಕಾರಣಕ್ಕೆ ಸಿಲುಕಿ ಮುರಿದು ಬೀಳುತ್ತವೆ. ನಂಬಿಕೆಯನ್ನ ಗಳಿಸುವುದು ತುಂಬಾ ಕಷ್ಟ ಎನ್ನುವುದು ಸರ್ವೇ ಸಾಮಾನ್ಯವಾಗಿ ಎಲ್ಲರಿಗು ತಿಳಿದಿಹ ವಿಷಯ.  ಆದರೆ ಗಳಿಸಿಹ ನಂಬಿಕೆಯನ್ನ ಉಳಿಸಿಕೊಳ್ಳುವುದು ದೊಡ್ಡ ಸಾಧನೆಯೇ ಸರಿ. ನಂಬಿಕಸ್ತ ಜನರು ತಿಳಿದಿಹ ಹೊರನೋಟವನ್ನು ಗಳಿಸಿಹ ಮನುಜರು ಅದೇ ರೀತಿಯಲ್ಲಿ ವರ್ತಿಸುವುದನ್ನು ಬಿಟ್ಟು ಸಲ್ಪ ಬದಲಾದ ರೀತಿಯಲ್ಲಿ ಭಾವನೆಯನ್ನ ವ್ಯಕ್ತಪಡಿಸಿದರೆ ಇರುವ ನಂಬಿಕೆಗೆ ಘಾಸಿ ಮಾಡಿದಂತೆ ಆಗುವುದಂತು ಖಂಡಿತ. ಅವನು ಅದೇ ರೀತಿಯಲ್ಲಿ ಕೊನೆತನಕ ಮುನ್ನಡೆಯ ಬೇಕು ಇಲ್ಲವಾದಲ್ಲಿ ಗಳಿಸಿದ ನಂಬಿಕೆ ಮುರಿದು ಬೀಳುವಲ್ಲಿ ಮೇಲುಗೈ ಸಾಧಿಸುತ್ತದೆ. ಇದರಿಂದಾಗಿ ನಂಬಿಕೆಯಲ್ಲಿ ವೈಮನಸ್ಸು ಮೂಡಿ ನಡುವಿನ ಸಂಬಂಧಗಳು ಹಾಳಾಗುವ ಸಾಧ್ಯತೆಯೇ ಜಾಸ್ತಿ. ವ್ಯಕ್ತಿಯಲ್ಲಾಗುವ ಸಣ್ಣ ಸಣ್ಣ ಬದಲಾವಣೆಯು ಸಹ ಬೇಸರಕ್ಕೆ, ವೈಮನಸ್ಸಿಗೆ, ವೈಷಮ್ಯಕ್ಕೆ ಕಾರಣವಾಗುತ್ತದೆ. ಅರ್ಥಮಾಡಿಕೊಳ್ಳದ ಮನಸ್ಸಾಗಿದ್ದಲ್ಲಿ ಬಿರುಕು ಮೂಡಿದ ಸಂಬಂಧವು ಬಿರುಕಾಗೆ ಇರುತ್ತದೆ ಅದಕ್ಕೆ ಸಮರ್ಥನೆಯಾಗಲಿ, ಕ್ಷಮಾಪಣೆಯಾಗಲಿ, ಸತ್ಯದ ಮಾತಾಗಲಿ ಬಿರುಕನ್ನು ಮುಚ್ಚಿ ಸಂಬಂಧ ಜೋಡಿಸುವ ಮೇಣವಾಗಿ ಮಾರ್ಪದುವುದಿಲ್ಲ ಅಥವಾ ನಂಬಿಕೆಯಲಿ ಮನಸ್ಸಿಗಾದ ಘಾಸಿಯನ್ನು ದೂರಾಗಿಸದು.

ನಂಬಿಕೆಯಲ್ಲಿ ವೈಮನಸ್ಸು ಹೇಗೆ ಮೂಡುತ್ತದೆ ಎನ್ನುವುದನ್ನು ತಿಳಿಯಲು ಪರೀಕ್ಷೆಗೊಳಪಡಿಸಿದ ಸ್ವಂತ ಅನುಭವ, ನಂಬಿಕೆಗಳಿಸಿ ಮುರಿದು ಹೋದ ಕೆಲವೊಂದು ನಿದರ್ಶನಗಳನ್ನ ನಿಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಇನ್ನು ಕೆಲವು ಕೇಳಿ & ನೋಡಿ ತಿಳಿದದ್ದು. ಇದನ್ನ ಸಾಕರಗೊಳಿಸಲು ಸಹಕರಿಸಿದ ನನ್ನ ಸ್ನೇಹಿತರಿಗೂ & ಸಂಬಂಧಿಗಳಿಗೂ ನನ್ನ ಕೃತಜ್ನತೆಯನ್ನು ಸಲ್ಲಿಸುತ್ತೇನೆ. ಈ ಪರಿವೀಕ್ಷಣೆಯ ಅಂಕಣ ಮುಂಚೂಣಿಯಲ್ಲಿರುವ ಅಂತರ್ಜಾಲದ ಮೂಲಕ ಆಗುವಂತಹ ಗೆಳೆತನ, ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರಿಂದಾಗಿ ಕೆಲವು ಸ್ನೇಹಿತ, ಸ್ನೇಹಿತೆಯರ ಬೇಸರಕ್ಕೆ, ವೈಮನಸ್ಸಿಗೆ ಗುರಿಯಗಿರುವುದಕ್ಕೆ ವಿಷಾಧಿಸುತ್ತ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ & ಅರ್ಥೈಸಿಕೊಂಡವರನ್ನ ಅಭಿನಂದಿಸುತ್ತೇನೆ.

ಗಳಿಸಿದ ಗೆಳೆತನದಲ್ಲಿ ಮಾಡುವಂತಹ ಪರಿವೀಕ್ಷಣೆಯು ನಂಬಿಕೆಗೆ ದ್ರೋಹ ಬಗೆದಂತೆ & ಆಟ ಆಡಿದಂತೆ ಆಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ. ಮಾಡಿರ್ತಕ್ಕಂತಹ ಪರಿವೀಕ್ಷಣೆ ಮನಸಿಗೆ ನೋವು ನೀಡಿದೆ ಆದರೆ ಆ ನೋವು ಸಹ ಒಂದೊಳ್ಳೆಯ ಪಾಠ ಕಲಿಸಿದೆ & ಈ ಅಂಕಣ ಬರೆಯಲಿಕ್ಕೆ ಸ್ಪೂರ್ತಿಯಾಗಿದೆ ಎನ್ನುವುದು ಸಮಾದಾನದ ಸಂಗತಿ. ಕೆಲವು ನಿದರ್ಶನಗಳತ್ತ ಸುತ್ತಿ ಬರೋಣ.

ಒಬ್ಬ ಹುಡುಗ ಎಲ್ಲರಿಂದಲೂ ಗೌರವಿಸಲ್ಪಟ್ಟು ಎಲ್ಲರ ಚಿತ್ತವನ್ನು ಚಟುವಟಿಕೆಯತ್ತ ಸೆಳೆದು ನಾಯಕನಾಗುತ್ತಾನೆ. ಆದರೆ ಆ ನಾಯಕ ಒಂದು ದಿನ ಬೇರೊಂದು ಹುಡುಗಿಗೆ ಮನಸೋತು ತನ್ನ ಮನಸಿನ ಭಾವನೆಯನ್ನು ಹೇಳುತ್ತಾನೆ. ಆಗ ಆಕೆ ಅದನ್ನು ತಿರಸ್ಕರಿಸಿ ನುಡಿಯುತ್ತಾಳೆ. ನೀನೊಬ್ಬ ಒಳ್ಳೆಯ ಹುಡುಗ ಆದರೆ ನೀನು ಈ ರೀತಿಯಾಗಿ ವರ್ತಿಸುವುದು ಸಮಂಜಸವಲ್ಲ ಯಾಕೆಂದರೆ ನಿನ್ನನ್ನು ನಾಯಕನಾಗಿ ಗೌರವಿಸುತ್ತೇನೆಯೆ ಹೊರತು ಸಂಗಾತಿಯಾಗಲ್ಲ, ಅಲ್ಲದೆ ನೀನು ಅಂತಹ ಸೆಳೆತಕ್ಕೆ ಒಳಪಟ್ಟು ಪ್ರೇಮಾರ್ಥಿಯಾಗಿದ್ದರೆ ನನ್ನ ಹೆತ್ತವರನ್ನು ಸಂಪರ್ಕಿಸಿ ವರಿಸಲು ಮುಂದಾಗುತ್ತಿದ್ದೆ ಆದರೆ ನಿನ್ನ ಈ ರೀತಿಯ ವರ್ತನೆಯಿಂದ ನಿನ್ನ ಮೇಲಿದ್ದ ಗೌರವಕ್ಕೆ ಧಕ್ಕೆಯಾಗಿದೆಯೇ ಹೊರತು ನಿನ್ನ ವರಿಸಲು ಮನಸಾಗಲಿಲ್ಲ ಎಂದು ಉತ್ತರಿಸುತ್ತಾಳೆ. ಇದರಿಂದಾಗಿ ಆ ನಾಯಕ ಗಳಿಸಿದ ನಂಬಿಕೆಗೆ ಅವಳ ಹತ್ತಿರ ಬೆಲೆ ಇಲ್ಲದಂತಾಗುತ್ತದೆ ಮತ್ತು ನಾಯಕನ ಮೇಲಿರುವ ನಂಬಿಕೆ ದೂರಾಗಿ ಬೇಸರಕ್ಕೆ ಕಾರಣವಾಗುತ್ತದೆ. ಅಲ್ಲಿ ಅವಳ ನಂಬಿಕೆಗೆ ನಾಯಕನಿಂದಲೇ ಚ್ಯುತಿಬಂದು, ಮಾಡಿದ ನಿವೇದನೆಯು ಮನಸಿಗೆ ಹಿಡಿಸದೆ ನಂಬಿಕೆ & ಗೌರವಕ್ಕೆ ಆದಂತಹ ಘಾಸಿಯ ಚಿತ್ರಣವಿಲ್ಲಿ ಮೂಡುತ್ತದೆ.

ಇದೆ ಅಂತರ್ಜಾಲದಲ್ಲಿ ಆದಂತಹ ಪರಿಚಯ ಸ್ನೇಹವಾಗಿ ಪರಸ್ಪರರು ಭೇಟಿಯಾಗಿ ಏನೋ ಹೊಸತನಕ್ಕೆ ಒಂದು ನಾಂದಿ ಹಾಡುತ್ತಾರೆ. ಇದೆ ರೀತಿಯಾಗಿ ಮುಂದುವರಿಯುತ್ತಿರುವಾಗ ಒಬ್ಬ ಸ್ನೇಹಿತ ತನ್ನ ಕೆಲಸದಲ್ಲಿ ಬಿಡುವಿಲ್ಲದೆ ಕರೆ ಮಾಡಿದ ಇನ್ನೊಬ್ಬ ಸ್ನೇಹಿತನಿಗೆ ಉತ್ತರಿಸದೆ ಸುಮ್ಮನಿರುತ್ತಾನೆ. ಇದೆ ರೀತಿ ೫-೬ ಬಾರಿ ಪುನರಾವರ್ತಿತವಾದಾಗ ಅವನ ಮೇಲಿದ್ದ ಗೌರವ, ನಂಬಿಕೆ ಕಡಿಮೆಯಾಗಿ ಗೆಳೆತನದಲ್ಲಿ ಬಿರುಕು ಮೂಡಿ ಅನ್ಯೂನ್ಯತೆ ಮಾಯವಾಗಿ ಬದಲಾವಣೆಗೆ ಪೂರ್ಣವಿರಾಮ ಬೀಳುತ್ತದೆ ಮತ್ತು ಬರೆ ಪರಿಚಯವಷ್ಟೆ ಉಳಿದಿರುತ್ತದೆ.

ಪರಿಚತರಾದ ಜೀವಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಮಾತನಾಡುತ್ತ ದೂರವಾಣಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಭೇಟಿಯಾಗುತ್ತಾರೆ. ಭೇಟಿಯಾದ ಕೆಲವೇ ದಿನಗಳಲ್ಲಿ ಆ ಹುಡುಗ ಹುಡುಗಿಯನ್ನ ಒಡಾಡಲು, ಸುತ್ತಾಡಲು ಆಮಂತ್ರಿಸುತ್ತಾನೆ. ಆಗ ಅವಳು ಯೋಚಿಸುತ್ತಾಳೆ, ಅಷ್ಟಾಗಿ ಪರಿಚಯವಿರದ ಹುಡುಗನ ಜೊತೆಗೇಕೆ ಒಡಾಡಬೇಕು ಎಂದು ಸಹಜವಾಗಿಯೆ ತಿರಸ್ಕರಿಸಿದರೂ ಹಿಂದೊಂದು ಕಟುವಾದ ಕಾರಣವಿರುತ್ತದೆ. ಅದಾವುದಂದರೆ "ನಂಬಿಕೆ". ಇದರಿಂದಾಗಿ ಅನ್ಯೂನ್ಯತೆ ಮೂಡಲು ಸಂಕೋಚ, ನಾಚಿಕೆ, ತನ್ನತನ, ಎಲ್ಲದ್ದಕ್ಕಿಂತ ಬಲು ದೊಡ್ಡದು "ನಂಬಿಕೆ" ಎನ್ನುವುದೆಲ್ಲೆ ಅಡ್ಡಬಂದು ನಂಬಿಕಸ್ತನಾದರೂ ಅದು ಬೇಸರಕ್ಕೆ ಕಾರಣವಾಗುತ್ತದೆ. ಕೆಲವರು ಸಮರ್ಥನೆ, ಕ್ಷಮೆಯಾಚನೆಗೆ ಬೆಲೆಕೊಟ್ಟು ಸ್ನೇಹವನ್ನು ಉಳಿಸಿಕೊಂಡರೂ ಅನ್ಯೂನ್ಯತೆಯಿಂದ ದೂರವಾಗುತ್ತಾರೆ.

ಅಂತರ್ಜಾಲದ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ, ಪ್ರೀತಿಯನು ಉಳಿಸಿಕೊಳ್ಳಲು ತವಕಿಸುವರು ಮತ್ತು ತಮ್ಮ ಮನೆಯವರನ್ನು ಒಪ್ಪಿಸಲು ವಿಫಲರಾಗಿ ಪ್ರೀತಿ, ಪ್ರೇಮ, ಸ್ನೇಹದಿಂದಲೇ ದೂರವಾಗಿ ಅಪರಿಚಿತರಂತೆ ಬದುಕುತ್ತಾರೆ. ಇಲ್ಲೆಲ್ಲವೂ ನಂಬಿಕೆಯಿಂದಲೆ ಸಾಧ್ಯವಾದರೂ ಅದು ಕೊನೆಯಲ್ಲಿ ಅಸಾಧ್ಯವಾಗುತ್ತದೆ. ಇಬ್ಬರ ನಡುವಿನ ನಂಬಿಕೆಗೆ ದ್ರೋಹವಾಗದಿದ್ದರೂ ನಂಬಿಕಸ್ತರು ನಂಬಿಕೆಗೆ ಅಡ್ಡಗಾಲು ಹಾಕುತ್ತಾರೆ.

ಮಾಡುವ ಕೆಲಸದಲ್ಲಿ ಸ್ವಲ್ಪ ವೈಪರಿತ್ಯವಾದರೂ ಇರುವ ನಂಬಿಕೆ ಅಳಿಸಿಹೋಗುತ್ತದೆ. ನಂಬಿಕೆಯಲ್ಲಿ ವೈಪರಿತ್ಯವಾದಲ್ಲಿ ಅದು ನಂಬಿಕೆದ್ರೋಹವಾಗಿ ೨ ಜೀವಿಗಳ ನಡುವಿನ ಸಂಬಂಧವನ್ನು ಸದೆಬಡಿಯುತ್ತದೆ, ಸದೆಬಡಿದ ಸಂಬಂಧ ವೈಷಮ್ಯಕ್ಕೆ ನಾಂದಿಯಾಗುತ್ತದೆ. ವೈಮನಸ್ಸು ಮೂಡಿದರೆ ಬಿಳುಪಾಗಿರುವಂತಹ ಸಂಬಂಧ ಕಪ್ಪಾಗಿ ಕಾಣುವುದು. ಇರುವ ನಂಬಿಕೆಗೆ ಒಮ್ಮೆ ಘಾಸಿಯಾದರೆ ವೈಮನಸ್ಸು ಅಥವಾ ವೈಷಮ್ಯ ಮೂಡಿ ತಿರುಗಿ ಒಂದಾಗಲು ಸಾಧ್ಯವಿಲ್ಲ ಎಂಬಂತಾಗುತ್ತದೆ. ಒಂದೊಮ್ಮೆ ತಿರುಗಿ ಜೊತೆಯಾದರೂ ಒಂದು ಬಿರುಕು ಅವರಿಬ್ಬರ ನಡುವಲ್ಲಿ ಗೋಚರಿಸುತ್ತದೆಯೇ ಹೊರತು ಆ ಸಬಂಧ ಪರಿಪೂರ್ಣವಾಗಿರುವುದಿಲ್ಲ. ತಿಳಿದಂತಹ ಕೆಲಸವು ಗ್ರಹಿಸಿದಂತಹ ವ್ಯಕ್ತಿಯಿಂದ ಆಗದೆ ಹೋದಾಗಲೂ ಈ ವೈಮನಸ್ಸು ಮೂಡಿ ನಂಬಿಕೆ ದೂರಾಗುತ್ತದೆ. ಯಾವ ಸ್ನೇಹಿತನೂ, ಸ್ನೇಹಿತೆಯೂ ತನ್ನ ಸಂಗಾತಿಯ ಬಗ್ಗೆ ವಿವರ ಹಂಚಿಕೊಳ್ಳುವಲ್ಲಿ ಹಿದೇಟು ಹಾಕುವುದಂತು ಬಹುಪಾಲು ಸತ್ಯ. ಅಂತಹ ಸಮಯದಲ್ಲಿ ಆ ಸಂಗಾತಿಯ ಬಗ್ಗೆ ತಿಳಿದೋ ತಿಳಿಯದೆಯೋ ತಿಳಿದಿರುವಂತಹ ವಿಷಯವನ್ನು ಹೇಳಿದಾಗ ಅದು ಕೆಲವರ ಮನಸ್ಸಿಗೆ ಹಿಡಿಸದೆ ತಿರಸ್ಕಾರದಿಂದ ಹೇಳಿದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಡಿಯುತ್ತಾರೆ. ಹಿಂಬದಿಯಿಂದ ಮಾಡಿದಂತಹ ಆರೋಪದಿಂದಲು ಈ ವೈಮನಸ್ಸು ಮೂಡಿ ವೈಷಮ್ಯ ಬೆಳೆಯುತ್ತದೆ. ಪರಿಸ್ಥಿತಿಗೆ ತಕ್ಕಂತೆ ಅಥವಾ ಅವಶ್ಯಕತೆಗೆ ಅನುಗನುಗುಣವಾಗಿ ಮಾಡಿದಂತಹ ಕೆಲಸದಿಂದ ಸ್ನೇಹ ಮತ್ತು ಸಂಬಂಧಗಳಲ್ಲಿ ವೈಮನಸ್ಸು ಮೂಡಿ ಜೀವಿಗಳು ದೂರಾಗುತ್ತಾರೆ. ಕೆಲವೊಮ್ಮೆ ಅವರು ವೈಷಮ್ಯದ ಗುಲಾಮರಾಗಿ ಹಗೆಸಾಧಿಸುತ್ತಾರೆ. ಕೆಲಸ ಮಾಡಿದಂತಹ ವ್ಯಕ್ತಿಯ ಬಗ್ಗೆ ನಂಬಿಕೆ ಇದ್ದಲ್ಲಿ ಅದನ್ನು ಮತ್ತು ಅದರ ಪೂರ್ವಾಪರವನ್ನು ಅರ್ಥೈಸಿಕೊಳ್ಳುವ ಶಕ್ತಿ ಇದ್ದಲ್ಲಿ ಈ ವೈಮನಸ್ಸಿಗೆ ಜಾಗವಿಲ್ಲದಂತಾಗುತ್ತದೆ. ಪ್ರತಿಯೊಂದು ಕಾರ್ಯದ ಹಿಂದೆ ಅದರದ್ದೆ ಆದಂತಹ ಉದ್ದೇಶ ಇದ್ದೇ ಇರುತ್ತದೆ. ಅದರ ಉದ್ದೇಶ ಸಕಾರಾತ್ಮಕವಾಗಿದ್ದಲ್ಲಿ ಅದನ್ನು ಮತ್ತು ಅವರನ್ನು ಬೆಂಬಲಿಸಿ ಒಳ್ಳೆಯ ಕಾರ್ಯದ ರೂವಾರಿಗಳಾಗ ಬೇಕು. ಅಂತರ್ಜಾಲದಲ್ಲಾಗುವಂತಹ ಕೆಲವೊಂದು ಸ್ನೇಹ ಸಬಂಧಗಳು ತ್ವರಿತಗತಿಯಲ್ಲಿ ಹಾಳಾಗುತ್ತಿವೆ. ಅದಕ್ಕೆ ಕಾರಣ ಪರಿಚಯಸ್ತರ ಪೂರ್ಣ ಪರಿಚಯ, ಪೂರ್ವಾಪರ, ವ್ಯಕ್ತಿತ್ವ ತಿಳಿದಿರದೆ ನಂಬಿಕೆಯಿಂದ ಮೋಹದಲಿ ಸ್ನೇಹವಾಗಿ ಅಥವಾ ಸೆಳೆತವಾಗಿ ಮನಸಿಗೆ ಘಾಸಿಯಾದಾಗ ಇಬ್ಬರ ನಡುವಿನಲ್ಲಿರುವ ನಂಬಿಕೆಗೆ ಚ್ಯುತಿಬಂದು ವೈಮನಸ್ಸು ಮೂಡುತ್ತದೆ. ಈ ಅಂತರ್ಜಾಲದಲ್ಲಾದ ಪರಿಚಯಸ್ತರ ಪೂರ್ವಾಪರ ಮತ್ತು ಅವರು ಮಾಡುವ ಕಾರ್ಯಗಳುದ್ದೇಶಗಳು ತಿಳಿದಿಲ್ಲದಿರುವುದರಿಂದ ಸ್ನೇಹ ಮತ್ತು ಸಂಬಂಧಗಳ ಬಿರುಕಿಗೆ ದಾರಿಯಾಗುತ್ತಿದೆ. ಏನೇ ಆದರೂ ಕರ್ತೃವಿನ ಬಗ್ಗೆ ಮತ್ತು ಕಾರಣಗಳ ಬಗ್ಗೆ ಸವಿವರವಾಗಿ ತಿಳಿಯುವುದು ಉತ್ತಮ ಎನ್ನುವುದು ಈ ಪರಿವೀಕ್ಷಣೆಯಿಂದ ಅರಿವಿಗೆ ಬಂದಂತಹ ಸತ್ಯ.


|| ಸೊಗಸು ||


ಕೋಗಿಲೆಗಾನದ ಮೇರವಣಿಗೆಯ ಗದ್ದಲದಲಿ
ವಸಂತನಾಗಮನವಾಗುತಿಹುದು ಹರುಷವಾಗಲಿ
ಮರದ ಮೇಲೆ ಜೋಡಿಯಾಗಿ ಕುಳಿತ ಗಿಳಿಯನು
ನೋಡೊ ಕಣ್ಣು ನಾಚಿ ಈಗ ಬಯಸಿದೆ ಸಂಗವನು
ಹೇಗೆ ಹೇಳಲಿ ಋತುವಿನಾಗಮನದ ಪರಿಯನು ||

ನವಿಲು ರಮಿಸಿ ಗರಿಯ ಬಿಚ್ಚಿ ನಾಟ್ಯವಾಡಿದೆ
ಜಿಂಕೆಯ ಮರಿಗಳು ಚಿಗುರೆಲೆ ತಿನ್ನುತ
ಓಡುತ ಜಿಗಿಯುವ ಸೊಬಗನು ನೋಡಲು ಚಂದ
ಕುಣಿಯಲು ಬರದ ಮುದ್ದು ರಾಣಿಯ ಕಾಣಲು
ನೆನೆದು ಮನದಲಿ ಚಂದದ ರೂಪ ಮೂಡುವುದು ||

ಶಿಖರದ ತುದಿಯಿಂದ ಜಾರಿದ ನೀರು
ಸಿರಿಯಾಗಿ ಉಕ್ಕುತ ಜಲಪಾತವಾಗಿದೆ
ದುಂಬಿಯೊಂದು ಹೂವ ನಡುವಲಿ ಕುಳಿತು
ಮಕರಂದ ಹೀರುತ ಹಸಿವ ಮರೆಸಿದೆ
ಏನ ನುಡಿಯಲಿ ಪದವು ಇಲ್ಲದೆ ಇಂಥ ಸೊಬಗಲಿ ||

Sunday, September 30, 2012

|| ಮುತ್ತೈದೆ ||

ಸಂಗಾತಿ ಸಂಗ ಕೊನೆತನಕ ಇರಲೆಂದು
ಸಹಜವಾಗಿ ಬಯಸುಳು ಮಹಿಳೆಯು
ಬಾಳಿನ ಸೂರ್ಯ ಹಣೆ ಮೇಲೆ ಬೆಳಗಲೆಂದು
ಬೆಳದಿಂಗಳಾಗಿ ಚಂದಿರನಂತೆ ಕಾಣುವಳು ||

ಹಸಿರು ಬಳೆಗಳ ಸದ್ದನ್ನು ಮಾಡುತ
ಗೆಜ್ಜೆಯ ನಾದವನು ಕಿವಿಯಲಿ ಕಂಪಿಸುತ
ಸಂಗಾತಿ ಸಂಪ್ರೀತಿ ಸ್ವಂತಕೆ ನೀಡುತ
ಮೂಗುದಾರ ಹಾಕುವಳು ಎಡವದಂತೆ ನಡತೆಯಲಿ ||

ಸಿಂಧೂರ ಸಿರಿಯಾಗಿ ಹಣೆಯಲ್ಲಿ ನಗುತಿರಲಿ
ಅರಿಶಿನ ಕುಂಕುಮವು ಸೌಭಾಗ್ಯ ನಿಧಿಯಾಗಿ
ಕೊರಳಲ್ಲಿ ಮಾಂಗಲ್ಯ ಬೆರಳಲ್ಲಿ ಕಾಲುಂಗುರ
ತುಂಬಿರಲು ಸೂಚಕವು ಧೈರ್ಯದಿ ಮೆರೆಯಲು ||

ಶ್ರಮಿಸುವಳು ಗೌರವ ತರುವಲ್ಲಿ ಹುಟ್ಟಿದ ಮನೆಗೆಂದು 
ಉರಿಯುತ ಬೆಳಗುವಳು ನೆಲೆನಿಂತ ಮನೆಯನ್ನು
ಸಂತಾನ ನೀಡಿ ಕುಲವನ್ನು ಬೆಳೆಸುತ
ಜೀವನವ ಸವೆಸುವಳು ಕಾಲಿಟ್ಟ ಮನೆಗಾಗಿ ||

ಪಡೆಯುವಳು ಮನಸಿಗೆ ಸಮಾದಾನ
ಪತಿಯನು ಪರದೈವವೆಂದು ಪೂಜಿಸುತ
ಸಾವಿನಲು ಬಯಸುವಳು ಸೌಭಾಗ್ಯವನು
ಕೊನೆತನಕ ಮಾಡುವಳು ಹಲವಾರು ವೃತಗಳನು ||

ಹೆದರಳು ಬದುಕಿನ ಏರಿಳಿತಗಳಿಗೆ
ಸಹಿಸುವ ಸಹನೆಯಲಿ ಗೆಲ್ಲುತ
ಎದುರಿಸುವಳು ನೋವಿನ ಕ್ಷಣಗಳನು
ಸೌಭಾಗ್ಯ ಸಿರಿಯನೊಂದೇ ಬಯಸುವಳು ಮುತ್ತೈದೆ ||

Saturday, September 29, 2012

.....ಗಣೇಶನಿಗೆ ಜೀವ ನೀಡುವ ಗೋಪಾಲ.....


ಗಣೇಶ ಹಬ್ಬ ಬಂತೆಂದರೆ ಎಲ್ಲರ ಚಿತ್ತವನ್ನು ಆಕರ್ಷಿಸುವ ಗಣೇಶ ಮೂರ್ತಿಗಳು ಹೊನ್ನಾವರದ ಹಳ್ಳಿಯಾದ ಕೆಕ್ಕಾರಿನಲ್ಲಿ ನಿರ್ಮಿತವಾಗುತ್ತದೆ ಎಂದರೆ ಹಲವು ಜನರಿಗೆ ನಂಬಲಸಾಧ್ಯವಾದ, ತಿಳಿಯದೇ ಇರುವ ಸಂಗತಿ. ೬೧ನೇ ವಸಂತಕ್ಕೆ ಕಾಲಿಟ್ಟ ಭಟ್ಟರು ಜನಿಸದ್ದು ೧-೮-೧೯೫೨ ರಲ್ಲಿ. ಸ್ವಂತ ಊರಾದ ಕೆಕ್ಕಾರಿನಲ್ಲಿ ಹುಟ್ಟಿ ಬೆಳೆದ ಭಟ್ಟರು ಕಲಾಕಾರನಾಗಿ ಬೆಳೆದುನಿಂತಿದ್ದು ಸಹ ಅದೇ ಊರಿನಲ್ಲಿ. ಹೆಚ್ಚಿನವರಿಗೆ ಇವರ ಹೆಸರು ತಿಳಿದಿಲ್ಲ. ಪ್ರಖ್ಯಾತರಾಗಿರುವುದು ಜಿ. ಡಿ. ಭಟ್ಟ ಎಂದು, ಪೂರ್ಣ ಹೆಸರು ಗೋಪಾಲಕೃಷ್ಣ ದೇವರು ಭಟ್ಟ, ಇವರ ಹತ್ತಿರದವರು ಜಿ. ಡಿ ಎಂದು ಕರೆಯುತ್ತಾರೆ

೨ ಪುತ್ರಿಯರೊಂದಿಗೆ ವೈವಾಹಿಕ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದು ಇಷ್ಟವಾದ ಚಿತ್ರಕಲೆಗೋಸ್ಕರ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಬೇರೆಯವರಿಗೆ ಭಾರವಾಗದೆ ಖುಷಿಯಿಂದ ಜೀವನ ನಡೆಸುವುದು ಇವರ ಜೀವನತತ್ವ. ಇವರನ್ನ ನಂಬಿ ಆಧರಿಸಿರುವವರನ್ನು ನೆಮ್ಮದಿಯಾಗಿಡುವುದು ಭಟ್ಟರ ಮಹಾತ್ವಾಕಾಂಕ್ಷೆಗಳಲ್ಲೊಂದು.



ಬೆಂಕಿಯಲ್ಲಿ ಅರಳಿದ ಹೂವು:-

ಭಟ್ಟರು ಬೆಳೆದು ಬಂದ ಹಾದಿ ಸುಗಮವಾಗಿರಲಿಲ್ಲವೆಂಬುದು ಅವರ ಜೀವನದ ಚಿತ್ರಣ ಕೇಳಿದಾಗ ತಿಳಿಯುವ ತಿರುಳು. ಗೋಪಾಲ ಬಾಲಗೋಪಾಲನಾಗಿದ್ದಾಗ ಎರಡು ತಿಂಗಳ ಅಂತರದಲ್ಲಿ ಹೆತ್ತವರನ್ನು ಕಳೆದುಕೊಂಡು ತನ್ನ ಅಣ್ಣ, ತಮ್ಮರೊಂದಿಗೆ ಅನಾಥಮಗುವಾಗಿ ಊರಿನವರ ಸಹಾಯದಿಂದ ಬೆಳೆದರು. ೮ ವರ್ಷದವನಿದ್ದಾಗಲಿಂದಲೇ ಕಷ್ಟದ ಜೀವನವನ್ನು ನಡೆಸಲು ಪ್ರಾರಂಬಿಸಿದ ಭಟ್ಟರಿಗೆ ಊರಿನ ಪ್ರತಿಯೊಬ್ಬರು ಜಾತಿಬೇಧ ಮರೆತು ಬೆಳವಣಿಗೆಗೆ ನೆರವಾದರು ಎಂದು ಕೃತಜ್ನತೆಯಿಂದ ನಮಿಸಿ ನುಡಿಯುತ್ತಾರೆ. ಏಕಲವ್ಯನಂತೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡ ಇವರು ಕಲಿತದ್ದು ಕೇವಲ ೯ನೇ ತರಗತಿ. ಸರಳ ಮತ್ತು ಸುಖೀ ಜೀವನ ಸಾಗಿಸುತ್ತಿರುವ ಇವರು ಚಿತ್ರಕಲೆಯಿಂದ ಜೀವನಕ್ಕೆ ಬೇಕಾಗುವ ಅವಶ್ಯಕತೆಗಳನ್ನ ಪೂರೈಸಿಕೊಂಡಿದ್ದಾರೆ. ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಅತ್ಯುತ್ತಮ ಚಿತ್ರಕಲೆಯನ್ನು ನೀಡುವುದು ಇವರ ಆಶಯ.



ಗಣೇಶಮೂರ್ತಿ ನಿರ್ಮಿಸುವಲ್ಲಿ ಅಣಿಯಾಗಿದ್ದು:-



ಗಣೇಶಮೂರ್ತಿಯನ್ನು ಪಕ್ಕದಮನೆಯಿಂದ ಪೂಜೆಗೆತರುತ್ತಿದ್ದರು. ಆದರೆ ಒಂದು ವರ್ಷ ಮನೆಯಲ್ಲಿ ಇಚ್ಚಿಸಿದ ಮೂರ್ತಿಯು ಸಿಗಲಿಲ್ಲ ಮತ್ತು ಸಿಕ್ಕಿದ ಮೂರ್ತಿ ಹಿಡಿಸದೆ ಸ್ವತಃತಾವೆ ಗಣೇಶಮೂರ್ತಿಯನ್ನು ಮಾಡೋಣವೆಂದು ಇವರ ಅಣ್ಣ ಎಂ. ಡಿ. ಭಟ್ಟರು ನಿರ್ಧರಿಸಿ ಮುಂದಿನ ವರ್ಷ ಗಣೇಶಮೂರ್ತಿ ಮಾಡುವಲ್ಲಿ ಅಣ್ಣ ಎಂ. ಜಿ. ಭಟ್ಟ ನಿರತರಾದರು. ಆ ಸಮಯದಲ್ಲಿ ಬರೇ ಮಣ್ಣನ್ನು ಮುದ್ದೆ ಮಾಡಿ ಕೊಡುತ್ತಿದ್ದ ಭಟ್ಟರು ೩ ವರ್ಷಗಳ ನಂತರ ಮೂರ್ತಿ ಮಾಡುವ ಸಮಯದಲ್ಲಿ ಅಣ್ಣ ಮನೆಯಲ್ಲಿ ಇಲ್ಲದೇ ಇದ್ದಾಗ ಅಂಕೋಲದ ಪುಂಡಲಿಕ ಮಹಾಲೆಯವರು ಮತ್ತು ಕರ್ಕಿ ಕೇಶವ ಭಂಡಾರಿಯವರು ನಿರ್ಮಿಸಿದ್ದ ಮೂರ್ತಿಗಳನ್ನು ನೋಡಿ, ಇಂಚಿಂಚು ಅಳತೆ ಮಾಡಿ ಗಣೇಶಮೂರ್ತಿಯನ್ನು ನಿರ್ಮಿಸಿದರು.  ೪ ದಿನದ ನಂತರ ಕಾರವಾರದಿಂದ ಮರಳಿದ ಅಣ್ಣ ಅಂದವಾದ ಗಣೇಶಮೂರ್ತಿಯನ್ನು ನೋಡಿ, ಮೊದಲು ಮೂರ್ತಿಯನ್ನು ಮುಟ್ಟಲು ಸಹ ಅವಕಾಶ ನೀಡುತ್ತಿರದವರು ಇನ್ನುಮುಂದೆ ಗಣೇಶಮೂರ್ತಿ ನಿರ್ಮಾಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಹೇಳಿ ಹುರಿದುಂಬಿಸಿ ಮನಮೋಹಕ ಗಣೇಶಮೂರ್ತಿ ನಿರ್ಮಿಸುವಲ್ಲಿ ಭಟ್ಟರು ಅಣಿಯಾಗುವಂತೆ ಮಾಡಿದ ಕಥಾನಕ.


ಕಲಿಯುಗದಲ್ಲೊಬ್ಬ ಏಕಲವ್ಯ:-

ಒಂದು ವರ್ಷದಕ್ಕೆಂದು ಟೈಲರಿಂಗ ಕ್ಲಾಸಿಗೆ ಗಾಜನೂರಿಗೆ ತೆರಳಿದ್ದ ಭಟ್ಟರು ವಾಸವಿದ್ದ ಸ್ಥಳದಲ್ಲಿ ನೇತಾಡುತ್ತಿದ್ದ ರಾಷ್ಟ್ರಪುರುಷರ ಚಿತ್ರಪಟಗಳನ್ನ ನೋಡಿ ಆಕರ್ಷಿತರಾದ ಭಟ್ಟರು, ಸ್ನೇಹಿತರೊಂದಿಗೆ ಸಂಜೆ ಸಮಯದಲ್ಲಿ ಸುತ್ತಾಡಲು ಹೋಗುವುದನ್ನು ತಪ್ಪಿಸಿಕೊಂಡು ಡಾ|| ರಾಧಾಕೃಷ್ಣನ್, ನೆಹರು, ಇಂದಿರಾ ಗಾಂಧಿಯವರ ಚಿತ್ರಗಳನ್ನು ಬಿಡಿಸಿ ಗೇಲಿ ಮಾಡುತ್ತಿದ್ದ ಸ್ನೇಹಿತರಿಗೆ ಸುಂದರ ಚಿತ್ರಗಳ ಮೂಲಕ ಉತ್ತರಿಸಿದ್ದರು. ಇದನ್ನು ನೋಡಿದ್ದ ಪ್ರತಿಯೊಬ್ಬರೂ ಹೊಗಳಿ ಬೇರೆಯವರನ್ನು ಕರೆದು ತೊರಿಸುವಂತೆ ಮಾಡಿತ್ತು ಎನ್ನುವುದು ಸಂತೋಷದ ವಿಷಯ. ಯಾರ ಬಳಿಯೂ ವಿಧ್ಯಾರ್ಥಿಯಾಗಿ ಅಭ್ಯಸಿಸದೆ ಚಿತ್ರಕಲೆಯಲ್ಲಿ, ಗಣೇಶಮೂರ್ತಿ ನಿರ್ಮಿಸುವಲ್ಲಿ ಏಕಲವ್ಯನಂತೆ ಕಲಿತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದು ನಿಜವಾಗಿಯೂ ಶ್ಲಾಘನೀಯ.



ನಾರಾಯಣ ಭಟ್ಟ ಹೆಬ್ಳಿಕೇರಿ ಮತ್ತು ಅಣ್ಣ ಎಂ. ಜಿ. ಭಟ್ಟರಲ್ಲಿ ಗಣೇಶಮೂರ್ತಿ ನಿರ್ಮಿಸುವ ಬಗ್ಗೆ ಮಾರ್ಗದರ್ಶನ ಪಡೆದುಕೊಂಡರೆ ನವಿಲಗೋಣ ಎಸ್. ಎಂ. ನಾಯ್ಕ ಇವರಲ್ಲಿ ಚಿತ್ರಕಲೆಯ ಬಗ್ಗೆ ಸಲಹೆ ಸೂಚನೆಗಳನ್ನು ಕೇಳಿಕೊಂಡರು.



ಗಮನವಿಟ್ಟು ನಿಜವಾದ ಆಕಾರ, ಭಾವನೆ ಬರುವಂತೆ ಸ್ಪಷ್ಟವಾಗಿ ಚಿತ್ರಿಸುವುದರಿಂದ ಪ್ರತಿಯೊಂದು ಸಣ್ಣ ಸಣ್ಣ  ಸಂಗತಿಗಳೂ ಮೂಡಿಬರುತ್ತವೆ. ತಲೆಬಿಬಿಸಿ ಇಲ್ಲದೆ ಕೆಲಸ ಮಾಡುವುದರಿಂದ ಇವರು ಹಸನ್ಮುಖಿಯಾಗಿರುತ್ತಾರೆ ಮತ್ತು ಇವರ ಮಾತು ಹಾಸ್ಯ ಭರಿತವಾಗಿರುತ್ತದೆ ಎನ್ನುವುದು ಇವರ ಜೊತೆಯಲ್ಲಿ ಒಡನಾಡಿದಾಗ ತಿಳಿದಂತಹ ವಿಷಯ. ರಂಗೋಲಿ ಹಿಟ್ಟಿನಲ್ಲಿ ಚಿತ್ರ ಬಿಡಿಸುವುದೆಂದರೆ ತುಂಬಾ ಇಷ್ಟವಂತೆ, ಹಾಗೆ ಚಿತ್ರ ಬಿಡಿಸುವಾಗ ಜೊತೆಯಲ್ಲಿದ್ದು ಚಿತ್ರದಲ್ಲಿ ಮೂಡುವ ಸೂಕ್ಷ್ಮತೆಯನ್ನು, ಚಿತ್ರದ ಭಾವವನ್ನು ನೋಡಿದವರೆಲ್ಲರು ಉದ್ಗರಿಸಿ ಹೊಗಳಿದ್ದನ್ನು ಸ್ವತಃ ಕೇಳಿದ್ದೇನೆ. ಚಿತ್ರ ಬಿಡಿಸುವಾಗ ಭಾವತುಂಬಿ ಚಿತ್ರದ ಸೂಕ್ಶ್ಮತೆಗಳಿಗೆ ಹೆಚ್ಚು ಒತ್ತು ನೀಡುವುದು ಅವರು ಗಮನಿಸುವಂತಹ ವಿಷಯ.

ಹತ್ತಾರು ಜನರು ಇವರ ವಿಧ್ಯಾರ್ಥಿಯಾಗಿ ಕಲಿತಿದ್ದಾರೆ. ಗಣೇಶಮೂರ್ತಿ ನಿರ್ಮಿಸುವಾಗ ಅಣ್ಣನ ಮಗ ವಿನಾಯಕ ಕೆತ್ತನೆ ಕೆಲಸ ಮಾಡಿ, ವಿಧ್ಯಾರ್ಥಿಯಾಗಿ ಕಲಿಯುತ್ತಿದ್ದಾರೆ. ರಾಮಚಂದ್ರ ಶೆಟ್ಟಿ ಮತ್ತು ಗಣೇಶ್ ಶೆಟ್ಟಿಯವರು ವಿಗ್ರಹಗಳಿಗೆ ಬಣ್ಣ ನೀಡುವುದರಲ್ಲಿ ಸಹಕರಿಸುತ್ತಿದ್ದಾರೆ. ೧೨೦ ಮೂರ್ತಿಗಳಲ್ಲಿ ೧.೫ ಅಡಿಯಿಂದ ೮ ಅಡಿಗಯಷ್ಟು ದೊಡ್ಡ ಗಣೇಶಮೂರ್ತಿಗಳನ್ನ ನಿರ್ಮಿಸಿದ್ದಾರೆ.

ಪ್ರತಿವರ್ಷ ಕಡೂರು ಮತ್ತು ಚಿತ್ರದುರ್ಗಕ್ಕೆ ಹೋಗಿ ಗಣೇಶಮೂರ್ತಿ ಮತ್ತು ದುರ್ಗಾಮೂರ್ತಿಗಳನ್ನು ನಿರ್ಮಿಸಿ ಕೊಡುತ್ತಾರೆ. ಪ್ರತಿಭೆಗೆ ಮನ್ನಣೆ ಸಿಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಭಕ್ತಿಗೀತೆ, ಭಾವಗೀತೆಗಳನ್ನು ಬರೆಯುವ ಹವ್ಯಾಸ ಹೊಂದಿದ್ದು ಅವುಗಳನ್ನು ಪ್ರಕಟಿಸುವ ಯೋಚನೆಯಲ್ಲಿದ್ದಾರೆ.


                                                             
೨೦೧೦ ಎಪ್ರಿಲ್ ನಲ್ಲಿ ನಡೆಸಿಕೊಟ್ಟ ಗೀತ ರಾಮಾಯಣದಲ್ಲಿ ೧೫೦ ಕಲಾವಿದರನ್ನು ಬಳಸಿಕೊಂಡು ನೀಡಿದ ರೂಪಕವನ್ನು ನೋಡಿ ಶ್ರೀ ರಾಘವೇಶ್ವರ ಶ್ರೀಗಳು ಸಾಕ್ಷಾತ್ ರಾಮಾಯಣವನ್ನೆ ಧರೆಗಿಳಿಸಿದೆ ಎಂದು ಪ್ರವಚಿಸಿ ಮಾಡಿದ ಶ್ಲಾಘನೆಯು ಜೀವನದಲ್ಲಿ ಮರೆಯಲಾಗದ, ಜೀವನದಲ್ಲೇ ಅತ್ಯಂತ ಖುಷಿ ನೀಡಿದ ಕ್ಷಣ.

ತೀರಾ ಬಡತನದ ಬದುಕು ನಡೆಸಿದ್ದ ಭಟ್ಟರು ಈಗ ಇವರನ್ನ ಅವಲಂಬಿಸಿದವರನ್ನು ಸುಖವಾಗಿಡಲು ಬೇಕಾದ ಅವಶ್ಯಕತೆಗಳನ್ನುಗಳಿಸಿದ್ದು ಇವರು ಸಾಧಿಸಿದಂತಹ ಒಂದು ಮೈಲಿಗಲ್ಲು. ೫೦೦ ಕಲಾವಿದರನ್ನು ಬಳಸಿ ಒಂದು ದೊಡ್ಡ ಮಹಾಭಾರತ ರೂಪಕವನ್ನು ಮತ್ತು ಶಂಕರಾಚಾರ್ಯರ ಕುರಿತಾದ ರೂಪಕವನ್ನು ಆಯೋಜಿಸುವುದು, ಸಾಧಿಸಬೇಕೆಂದುಕೊಂಡಂತಹ ಮೈಲಿಗಲ್ಲು.

ಈ ಮಟ್ಟಕ್ಕೆ ಮೇಲೇರಲು ಸಹಕರಿಸಿದ ಎಲ್ಲ ಮೆಟ್ಟಿಲುಗಳನ್ನು ಸ್ಮರಿಸುತ್ತ ಮುಂದಿನ ದಿನಗಳಲ್ಲಿ ಸಂತ್ರಪ್ತಿದಾಯಕವಾದ ಪ್ರೀತಿ, ಸಹಕಾರ ಸಿಗಲೆಂದು ಬಯಸುತ್ತ ಕೃತಜ್ನತೆಯಿಂದ ಭಾವುಕರಾದರು.


1) ಇಂತಹ ಮೇರು ಪ್ರತಿಭೆಯಿದ್ದು ತೆರೆಮರೆಯಲ್ಲುಳಿಯಲು ಕಾರಣ..?
ತೆರೆಮರೆಯಲ್ಲುಳಿದಿಲ್ಲವೆಂಬ ಭಾವ ನನ್ನಲ್ಲಿದೆ. ಬೇರೆ ಊರುಗಳಿಂದ ಜನರೆಲ್ಲ ಬಂದು ಗಣೇಶ ಮೂರ್ತಿಯನ್ನು ನೋಡ್ತಾರೆ ಮತ್ತು ಭಾವಚಿತ್ರಗಳನ್ನ ಬಿಡಿಸಿಕೊಂಡು ಹೊಗ್ತಾರೆ. ಕ್ಲಿಷ್ಟಕರವಾದ ಚಿತ್ರ ಬೇರಾರಿಂದಲು ಬಿಡಿಸಲಾಗುವುದಿಲ್ಲ ಎಂದಾಗ ಜಿ. ಡಿ. ಭಟ್ಟ ಬಿಡಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುವಷ್ಟು ಪ್ರಚಲಿತದಲ್ಲಿದ್ದೇನೆ ಎನ್ನುವ ಸಂತೋಷವಿದೆ.


2) ಬೇರೆಯಾವ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆಗಳಿವೆ..?
ನಾಟಕ (ನಟನೆ, ನಿರ್ದೇಶನ), ಯಕ್ಷಗಾನ, ನಾಗರಹಾವನ್ನು ಮತ್ತು ಕೆಂಪುಮೂತಿಯ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವುದು, ಮದುವೆ ಮುಂಜಿಗಳಿಗೆ ಮಂಟಪ ಮಾಡುವುದು, ಸಭೆ ಸಮಾರಂಭಗಳಿಗೆ ವೇದಿಕೆ ಸಿದ್ಧಪಡಿಸುವುದು.


3) ಆಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ನಿಮ್ಮನ್ನು ನೀವು ಹೇಗೆ ತೊಡಗಿಸಕೊಳ್ಳುತ್ತೀರಿ..?
ಯಕ್ಷಗಾನದಲ್ಲಿ ಕೌರವ, ಅಕ್ರೂರ, ಆಂಜನೇಯ ಮುಂತಾದ ಕೆಲವು ಪಾತ್ರಗಳನ್ನ ಮಾಡಿದ್ದೇನೆ. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ ಮತ್ತು ನೂರಾರು ನಾಟಕಗಳನ್ನು ನಿರ್ದೇಶಿಸಿ ನಟಿಸಿದ್ದೇನೆ. ಅಂದವಾದ ವೇದಿಕೆ, ಮಂಟಪಗಳನ್ನು ರಾಜ್ಯಮಟ್ಟದ ನಾಟಕೋತ್ಸವದಲ್ಲಿ, ರಾಮೋತ್ಸವದಲ್ಲಿ, ಗೋಕರ್ಣದ ಶಿವರಾತ್ರಿ ಉತ್ಸವದಲ್ಲಿ ಮತ್ತು ಕೆಲವು ಮೆರವಣಿಗೆಗಳಲ್ಲಿ ರಥಗಳನ್ನು ಮಾಡಿರುವುದು ಖುಷಿತಂದಿದೆ.


                                                                                                                                                                                    Interviewed and Written By,
                                                                                                                                                                                    ಗುರಿಮುಟ್ಟುವ ತನಕ,
                                                                                                                                                                                    ವಿನಾಯಕ ಭಾಗ್ವತ.
                                                                                                                                                                                    vinayak.nilkod@gmail.com
                                                                                                                                                                                    http://vinayakgbhagwat.blogspot.com/

|| ಹುಣ್ಣಿಮೆ ರಾತ್ರಿಯುಲಿ ತಂಗಾಳಿ ತಂಪನಲಿ ||


ತಂಗಾಳಿಯು ಬೀಸುತ ತಂದಿದೆ
ಕಾಮನೆಯನು ನಿನ ಸೇರುವ ಹರುಷದಲಿ
ಹುಣ್ಣಿಮೆ ರಾತ್ರಿಯು ತುಂಬಿದೆ
ಕಾಂತಿಯನು ಬೆಳದಿಂಗಳ ತಂಪಿನಲಿ
ಈ ಜಗವು ಕಾಣುತಿದೆ
ಗೋಲಿಯಂತೆ ಭಾವನೆಯ ನೋಟದಲಿ ||

ಬಳಿಯಿರಲು ಪ್ರತಿ ಕ್ಷಣದಲೂ
ಸುಳಿಯದು ನೋವಿನ ಕರಿ ಛಾಯೆಯು
ಮಂಜಿನ ಬೆವರ ಹನಿ ಸೋಕಲು
ತುಸುವಾದರೂ ಮಿತಿ ಮೀರುವಾಸೆಯು
ಮಡಿಲಲ್ಲಿ ಮಲಗುತ ಮಗುವಾಗುವೆ
ಪರಿಸರದಲಿ ಪಸರಿಸುತಿರಲು ನಿನ ಹವೆಯು ||

ಈ ತಂಪಲಿ ನಿನ ಕಂಪಲಿ
ಮಿನುಗುವ ಆಭರಣದ ತಿರುಳಂತೆ
ಹೊಳಪಿನ ಆ ತಾರೆಯು
ಗೊಚರಿಸುತ ಆಕಷಿಸುತಿದೆ ವಿಲೋಚನವನು
ನಿನ ಸನಿಹವ ನನಗಿರಿಸು
ಧನ್ಯತೆಯ ಭಾವದಲಿ ನಾ ಮೀಯಲು ||