ತಂಗಾಳಿಯು ಬೀಸುತ ತಂದಿದೆ
ಕಾಮನೆಯನು ನಿನ ಸೇರುವ
ಹರುಷದಲಿ
ಹುಣ್ಣಿಮೆ ರಾತ್ರಿಯು ತುಂಬಿದೆ
ಕಾಂತಿಯನು ಬೆಳದಿಂಗಳ ತಂಪಿನಲಿ
ಈ ಜಗವು ಕಾಣುತಿದೆ
ಗೋಲಿಯಂತೆ ಭಾವನೆಯ ನೋಟದಲಿ
||
ಬಳಿಯಿರಲು ಪ್ರತಿ ಕ್ಷಣದಲೂ
ಸುಳಿಯದು ನೋವಿನ ಕರಿ
ಛಾಯೆಯು
ಮಂಜಿನ ಬೆವರ ಹನಿ
ಸೋಕಲು
ತುಸುವಾದರೂ ಮಿತಿ ಮೀರುವಾಸೆಯು
ಮಡಿಲಲ್ಲಿ ಮಲಗುತ ಮಗುವಾಗುವೆ
ಪರಿಸರದಲಿ ಪಸರಿಸುತಿರಲು ನಿನ
ಹವೆಯು ||
ಈ ತಂಪಲಿ ನಿನ
ಕಂಪಲಿ
ಮಿನುಗುವ ಆಭರಣದ ತಿರುಳಂತೆ
ಹೊಳಪಿನ ಆ ತಾರೆಯು
ಗೊಚರಿಸುತ ಆಕಷಿಸುತಿದೆ ವಿಲೋಚನವನು
ನಿನ ಸನಿಹವ ನನಗಿರಿಸು
ಧನ್ಯತೆಯ ಭಾವದಲಿ ನಾ
ಮೀಯಲು ||
No comments:
Post a Comment