Wednesday, March 15, 2017

ನಗುತಿರು ರೂಪಸಿ

ನಗುವೆಯಾ ನನ್ನ ರೂಪಸಿ?
ನಿನ್ನ ನೋವು ನನಗಿರಿಸಿ
ಸೋಲದೆ ಪ್ರೀತಿ ಕಡಲಿನಲಿ
ಹೆದರದೆ ಬಾಳ ಪಯಣದಲಿ
ಬೆಳಗುವ ದೀಪ ನೀನಾಗು
ಅರಳಿದ ಸುಗಂಧದ ಹೂವಾಗು

ಕಣ್ಣಿನಲಿ ಕಂಬನಿಯ ಕಣವಾಗಿ
ಅಡಗಿರುವೆ ತಡೆಯಾಗಿ ಹಿಡಿದು
ದೂಡದಿರು ಹೊರಗೆ ಕಣ್ಣಿರಿನಲಿ
ಮಿನುಗುವೆನು ಕಣ್ಣ ಗುಡ್ಡೆಯಲಿ

ಗುಪ್ತ ಸಂವೇದನೆಯು ಧಮನಿಯಲಿ
ಸೂಕ್ತ ಪ್ರೇರಣೆಯು ಬಾಳಿನಲಿ
ದೀವಿಗೆಯ ದೀಪದಲಿ ದಿವ್ಯವಾಗು
ಬದುಕಿನ ಬವಣೆಯಲಿ ಭವ್ಯವಾಗು

ದಿನದ ನೋವ ನುಂಗಿ
ಅರಿತೆ ಭಾವದ ಭಂಗಿ
ಮರುಗದಿರು ಸ್ಪುರಿತೆಯೆಂದು
ಕೊರಗದಿರು ಕರ್ಮಕ್ಕೆಂದು
ಬೇಸರಕೆ ಹಸನದ ರೂಪ
ಅವಿರತ ಕೊಡುವ ಭೂಪ

2 comments:

  1. ದುರುಳ ಪರಿಸ್ಥಿತಿಗೆ ದೂರಾದ ಪ್ರೇಯಸಿಗೆ ಸುಖ ತ್ಯಾಗಿಯ ಮಾತುಗಳು ಚೆನ್ನಾಗಿವೆ

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete