ಹಗೆಯಲಿ
ನಿರ್ಲಕ್ಷ್ಯವು
ಜಿದ್ದಿನಲಿ
ನಿಷ್ಕಾಳಜಿಯು
ಮಾನಸಿಕ
ಹಿಂಸೆಯೆ ಬದುಕಾಗಿದೆ
ಕೆಲಸದಲಿ
ಮನಸಿಲ್ಲ
ಬೇರೇನೂ
ಬೇಕಿಲ್ಲ
ಈ ಮನವು ಮಿಡಿಯುತಿದೆ ನಿನಗಾಗಿಯೆ
ಇದ್ದಾಗ
ಕಿರಿಕಿರಿಯಾಗಿ
ಸತ್ತಾಗ
ಸರಿಯಾಗಿ
ಕಾಣುವುದೇ
ಪ್ರೀತಿಯ ಪರಮಾವಧಿ
ನಿನಗಾಗಿ
ನಾನೆಂದು
ನನ್ನೊಲವು
ನಿನಗೆಂದು
ಶುರುವಲ್ಲಿ
ಭರವಸೆಯ ಸಂಭಾಷಣೆ
ಉಳಿದಿಲ್ಲ
ಆ ಮಾತು
ನುಡಿಯೆಲ್ಲ
ಬರಿ ತೋಪು
ಅನುರಾಗ
ಹಾಳಾಯ್ತು ಅಹಂಮಿನಲಿ
ಮಾತುಗಳೆ
ಹಿಂಸೆಯು
ಉಳಿದವರೆ
ಮುಖ್ಯವು
ನೀ ಕಂಡಾಗ ಬಾಳಿನಲಿ ನೆಮ್ಮದಿಯನು
ಕಳೆದಂತೆ
ದಿನವೆಲ್ಲ
ಹಳಸಿಹುದು
ಆ ಪ್ರೀತಿ
ಸಾವನು
ಬಯಸಿಹುದು ವಿರಹದಲ್ಲಿ
ರಂಗಿಲ್ಲ
ಕಾಮನಬಿಲ್ಲಿನಲಿ
ಅಳುತಿರಲು
ಮೇಘಗಳು
ಮಳೆಯೆಂಬ
ಕಂಬನಿಯ ಸುರಿಸುವಾಗ
ಚಳಿಗಾಲ
ಬಂದಿರಲು
ಎಲೆಗಳೆಲ್ಲ
ಉದುರಿರಲು
ಚಿಗುರಲು
ವಸಂತನ ನಿರೀಕ್ಷೆಯಲಿ
ಬರಬಹುದೇ
ಆ ದಿನವು
ನಾ ಸತ್ತ ಮರು ಕ್ಷಣದಿ
ನನ ಜೀವ ಖುಷಿಯಲ್ಲಿ ನಗುತಲಿರಲು
ಸಾವಿನ ಮಾತು ಅದೇಕೆ ಅದೇಕೇ?
ReplyDeleteವಿರಹದ ಬಿಸಿಲ ತಾಪವನು ಅಳಿಸಲು ಕಾಯಬೇಕಷ್ಟೇ ಮತ್ತವಳ ಪುನರಾಗಮನದ ವಸಂತೋತ್ಸವ ಪರ್ವಕಾಲ.
ಶುಭಮಸ್ತು.. ಕಲ್ಯಾಣಮಸ್ತು..
ಪುನರಪಿ ಜನನಂ ಪುನರಪಿ ಮರಣಂ..
ReplyDeleteಸೊಗಸು