ಹೋಳಿಯ
ಹಬ್ಬದಿ
ಓಕಳಿಯಾಡಲು
ಬಣ್ಣಕೆ
ರಂಗಿಲ್ಲ
ಪ್ರೀತಿಯ
ಹೆಸರಲಿ
ಜೀವವು
ಬೆರೆಯಲು
ಸಮಯವು
ಒದಗಿಲ್ಲ
ಚಂದ್ರನು
ಬಂದನು
ಸುಡು
ಬೆಳದಿಂಗಳ ತಂದನು
ಉರಿಯಲು
ಮೈ ಮನವೆಲ್ಲ
ತನ್ನ
ಅಹಂಮ್ಮಿನ ಕೋಟೆಯಲಿ
ತಾ ಮಾಡುವುದೇ ಸರಿಯೆಂದು
ತಮಗ್ಯಾಕೆ
ಪರಸ್ಪರರ ಹಂಗೆಂದು
ದರ್ಪವು
ತುಂಬಿದ ಮನದಲ್ಲಿ
ಜಿದ್ದಾಜಿದ್ದಿನ
ಹುಸಿಮುನಿಸು
ನನಗಾಗೇ
ಬೇಕು ನನ್ನವಳು
ಮುಡಿಪಾಗಿಡಬೇಕು
ಪ್ರತಿಕ್ಷಣಗಳನು
ನನ್ನವಳ
ಪ್ರತಿ ಅವಶ್ಯಕತೆಯಲಿ
ನಾನೇ
ಮೊದಲಿಗನಾಗುವ ಹಂಬಲಕೆ
ವಿರಹದ
ಆಕ್ರೋಶವು ದನಿಯಾಗುತಿದೆ
ಹಕ್ಕಿಯಂತೆ
ಹಾರಾಡುವ ಬಯಕೆಯು
ಸ್ವಾವಲಂಬಿಯ
ದುಡಿಮೆಯ ದರ್ಪಕೆ
ಪ್ರಭಾವದಿ
ಹೊಂದಲು ಬದುಕಿನ ಇಂಗಿತ
ಅಹಂಕಾರದಿ
ತೊರೆಯಲು ಅನುಬಂಧವನು
ಮದುವೆಯ
ನಂತರ ಮುಂದಿನ ಮಾತುಗಳು
ಒಪ್ಪದ
ಮನಸಲಿ ತೊರೆಯಲು ಇಬ್ಬರು
ಸೊಕ್ಕಿನ
ಮಾತಲಿ ದೂರುವರು
ಸರಿಯಾಗದೆ
ಒಲವಿದೆ ಮೆಚ್ಚಿದ ಮನಸಲಿ
ಎದೆಯಾಳವ
ಅರಿಯುವ ಕೊರತೆಯಲಿ
ಸಾಗುತ
ದೂರ ಸಾಗರ ತೀರದಲಿ
ತೊರೆಯದಿರಲಿ ಸಂಗ. ಬೆರೆಯಲಿ ವಿಭಿನ್ನತೆಯೊಳು ಸಮಾನ ಮನಸುಗಳು. ಸಾಕ್ಷಾತ್ಕರಿಸಲಿ ಒಲವು. ಎಳವೆಯ ಬಿರುಸು ಪಕ್ವವಾದಂತೆಲ್ಲ ಸುಮಧುರ ಜೀವನಗಾನವಾಗುವುದು.
ReplyDeleteಒಳಿತೆ ನೆನೆಯೋಣ... ಒಲವನು ಉಳಿಸೋಣ...