Tuesday, August 19, 2014

|| ನೋಡಿ ಜೋಡಿ ||

ನಿನ್ನಂದು ಕಂಡಾಗ
ಕವಿದಂತೆ ಮೋಡ
ನೀ ನಗಲು ತುಟಿಯಲ್ಲಿ
ಧರೆಗಿಳಿದಂತೆ ವರುಣ

ನೀ ನೀಡಲು ಉತ್ಸಾಹ
ಬದುಕಲು ಪ್ರೋತ್ಸಾಹ
ನನಗೆಂದು ಉಡುಗೊರೆ
ನೀ ಕೊಡುವ ಜನ್ಮ

ನಿನ್ನಿಂದ ನಡೆಯಲಿ
ನನ್ನ ಬಾಳ ಪಯಣ
ಇನ್ನೊಂದು ತಲೆಮಾರಿಗೆ
ನಮ್ಮಿಂದ ಜನನ

1 comment:

  1. ವರ್ತಮಾನವನ್ನು ಉತ್ತೇಜಿಸುತ್ತ ಭವಿತವ್ಯವನ್ನು ಬಂಗಾರವಾಗಿಸುವ ನಿಮ್ಮ ಒಳ್ಳೆಯ ಉದ್ಧೇಶಕ್ಕೆ ನಲ್ಲೆಯೂ ಕೊಡಲಿ ಸಾಥ್...

    ReplyDelete