ನೀ ತೊರೆದರೆ ನನ್ನ
ಜೀವ ಹೋಗುವ ಮುನ್ನ
ಆ ಚಂದ್ರನ ಕಣ್ಣಲ್ಲೂ
ನೀರು ಬರುವುದು
ಮುಸುಂಬ್ಳವ ಒರೆಸುತ
ಆ ಮೇಘ ಓಡುತಿರುವವು
ಮಳೆಯನ್ನು ಸುರಿಸಿ
ನಿನ್ನ ಹೆಜ್ಜೆ
ಗುರುತನ್ನು ಅಳಿಸಲು ||
ತೊಳೆಯುವೆನು ಚೊಕ್ಕದಾಗಿ
ಗೋಮಯವ ಹಾಕಿ
ಮನಸಲಿ ನೀ ಹಾಕಿದ
ಹಚ್ಚೆಯನು ಅಳಿಸಲು ಆಗದೆ
ಸೋಲುವೆನು ಸಾವಿನಲು
ಬೇತಾಳ ನಾನಾಗದೆ ||
ಹೊಸದಾದ ಸಂಗೀತ
ಲಯವಿರದ ರಾಗದಲಿ
ಸುಯ್ಯೆಂದು ಕೇಳುತ್ತಿದ್ದರೂ
ನೀ ಹೋದ ಘಳಿಗೆಯನು
ಒತ್ತಿ ಒತ್ತಿ ಹೇಳುತಿರುವವು
ನನ್ನೆದೆಯ ಬಡಿತಗಳು ||
ಜೀವ ಹೋಗುವ ಮುನ್ನ
ಆ ಚಂದ್ರನ ಕಣ್ಣಲ್ಲೂ
ನೀರು ಬರುವುದು
ಮುಸುಂಬ್ಳವ ಒರೆಸುತ
ಆ ಮೇಘ ಓಡುತಿರುವವು
ಮಳೆಯನ್ನು ಸುರಿಸಿ
ನಿನ್ನ ಹೆಜ್ಜೆ
ಗುರುತನ್ನು ಅಳಿಸಲು ||
ತೊಳೆಯುವೆನು ಚೊಕ್ಕದಾಗಿ
ಗೋಮಯವ ಹಾಕಿ
ಮನಸಲಿ ನೀ ಹಾಕಿದ
ಹಚ್ಚೆಯನು ಅಳಿಸಲು ಆಗದೆ
ಸೋಲುವೆನು ಸಾವಿನಲು
ಬೇತಾಳ ನಾನಾಗದೆ ||
ಹೊಸದಾದ ಸಂಗೀತ
ಲಯವಿರದ ರಾಗದಲಿ
ಸುಯ್ಯೆಂದು ಕೇಳುತ್ತಿದ್ದರೂ
ನೀ ಹೋದ ಘಳಿಗೆಯನು
ಒತ್ತಿ ಒತ್ತಿ ಹೇಳುತಿರುವವು
ನನ್ನೆದೆಯ ಬಡಿತಗಳು ||
ಮುಸುಂಬ್ಳ ವಿಭಿನ್ನ ಪದ. ದಯಮಾಡಿ ಅರ್ಥ ವಿವರಣೆ ಕೊಡಿರಿ.
ReplyDeleteಉಳಿದಂತೆ ಇದು ಮನ ಮುಟ್ಟುವ ಕವನ.
ಧನ್ಯವಾದಗಳು ಸಾರ್.
ReplyDeleteಮೂಗು + ಸುಂಬಳ = ಮೂಸುಂಬ್ಳ
ಅಂದರೆ ನೆಗಡಿಯಾದಾಗ ಮೂಗಿನಲ್ಲಿ ಬರುವ ಗೊಂಡೆ.
moosumbla byadagittu.ulidante olle prayatna ham
ReplyDelete