Friday, July 25, 2014

|| ಸಾವಿನ ಬದುಕು ||

ನಾ ಹೆಣವಾಗಿ ಮಲಗಿರೂ
ಉಸಿರಾಡುತ ಬದುಕಿದರೆ
ನಿನ್ನಗಲಿ ಉಳಿಯಲಾಗದೆ
ವಿರಹದಲಿ ಸಾಯುವೆ

ನಾ ಸತ್ತರೂ
ನಿನ್ನ ಕಾಡುವ
ದೆವ್ವ ನಾನಾಗೆನು
ನಾ ಬಯಸುವ ಜಗತ್ತು
ಹಸಿರಾಗ ಬೇಕು
ನೀ ಖುಷಿಯಲಿ ಉಸಿರಾಡುವಾಗ

ಜಾರುತಿದೆ ಎದೆಯಲಿ
ಹೃದಯದ ಕೊಟೆ
ನಿನ್ನಾಳ್ವಿಕೆ ಅಳಿದ
ಮರುಕ್ಷಣದಲಿ

ಬಿಕ್ಕಳಿಕೆ ಮರೆಯಾಗಿದೆ
ನೀ ನನ್ನ ಮರೆತಿರಲು
ಘಾಸಿಯಾಗಿಹ ಮನಸಿಗೆ
ವಾಸಿಯಾಗದ ಕಾಯಿಲೆ
ಶವ ಸಂಸ್ಕಾರಕ್ಕೆ ನಾಂದಿಯು

3 comments:

  1. ವಿರಹ ಮನಮುಟ್ಟುವಂತೆ ಬಂದಿದೆ.,

    ReplyDelete
  2. ನಾ ಸತ್ತರೂ
    ನಿನ್ನ ಕಾಡುವ
    ದೆವ್ವ ನಾನಾಗೆನು


    ಸೂಪರ್ರೋ...ಬರಿ ಬರಿ :)

    ReplyDelete