ನನ್ನೆದಯ ಅರಮನೆಯ
ಕಾಯುತಿರುವ ಸೈನಿಕ ನಾನು
ಅದರೊಳಗೆ ಕೂತಿರುವ ಸಿಂಹಾಸನವ
ಎರಿರುವ ಮನದನ್ನೆ ಮನ್ನಿಸು
ನನ ತಪ್ಪನು
ಈ ಜೀವಕೆ ಉಸಿರಾಗು
ಬದುಕನ್ನು ನೀ ನೀಡು
ನನ ಬಾಳಿನ ಸರ್ವಸ್ವವು
ನೀನಲ್ಲವೆ...? ||
ಎದಿರು ಸಿಟ್ಟಿನಲಿ ಭೈದಿರುವೆ
ಎದುರಿನಲಿ ನಿಂತಿರುವೆ
ಜಗಳಾಟಕೆ ಕೊನೆಯಾಟ ಕ್ಷಮೆಯಲ್ಲವೆ
ಮುನಿಸನು ಮರೆತಿರುವೆ
ಮಳೆಯಲ್ಲಿ ನೆನೆದಿರುವೆ
ಈ ಪ್ರಮಾದಕೆ ಪರಿಹಾರುಳಿದಿಲ್ಲವೆ...?
||
ಆ ಕಡಲ ತೆರೆಯಲ್ಲು
ದಡ ಸೇರುವ ಕಸದಲ್ಲು
ನನ ಪ್ರೀತಿಯ ಕುಟುಕು
ನಿನಗಲ್ಲವೆ
ಕೆಟ್ಟ ಭೂತವನು ಮರೆಯುವುದು
ನಡೆದ ಸಿಹಿಯನ್ನು ನೆನೆಯುವುದು
ಐಕ್ಯತೆಯು ನಮ ಬಾಳಿಗೆ
ನೆರವಾಗೊ ವರವಲ್ಲವೆ...? ||
ಅಮಿತ ಪ್ರೇಮಾರ್ಪಣ ಭಾವಗೀತೆ.
ReplyDelete