ಒಲವಿನ ಮೂಟೆ ಖಾಲಿಯಾಗಲು
ಸರಿ ಸಮಯ ಬಿಡುವಿಲ್ಲದಂತೆ
ಮರಿ ಮನಸು ಮುದುಡಿರುವಾಗ ||
ನಕ್ಷೆಯಲು ಉಳಿಸಿಲ್ಲ ನಿನ ಗುರುತು
ಮನಸಲ್ಲು ಉಳಿದಿಲ್ಲ ನನ ಮರೆತು
ಕೊನೆಯಿರದ ಕೋಶದಲು ಸಿಗದಂತೆ
ಆಡುಭಾಷೆಯ ಪದವಾಗಿ ಹೋದೆ ||
ನಿಘಂಟಿನಲಿ ನೀನಿರದಿರೆ ಇನ್ನೇನಿದೆ
ಖಾಲಿ ಕಾಗದದ ಪುಸ್ತಕ
ನನ್ನೆದೆಯ ಅರಮನೆಯು ಸೋರುತಿಹುದು
ನಿನ ಪ್ರೀತಿಯ ಹೊದಿಕೆಯಿಲ್ಲದೆ ||
ನಾ ಬಡವನಾದೆ ನಿನ ಒಲವಿಲ್ಲದೆ
ಬಲ್ಲಿದನಾಗುತಿರುವೆ ವಿಷಮದೆಡೆಗೆ
ನೀ ಒಲಿದು ಅಲೆದು ಹೋದೆ
ನನ ಅಲೆಮಾರಿ ಮಾಡಿ ಅಳೆದೆ ||
ಕುಳಿತಿರುವೆ ಚಹ ಕುಡಿಯಲು
ಗೂಡಂಗಡಿಯ ಎದುರಲಿ ತೋಚದೆ
ನೀ ಸ್ಥಳಾಂತರ ಮಾಡಿರಲು
ತಬ್ಬಿಬ್ಬಾಗಿಹೆನು ಕಲ್ಪಿಸಲು ಆಗದೆ ||
ಅಮಿತ ವ್ಯಥೆ ಮತ್ತು ನೊಂದ ಹೃದಯದ ವಿರಹ ಅಕ್ಷರಗಳಾಗಿ ಮೂಡಿಬಂದಿದೆ.
ReplyDeleteವಿರಹ ಗೀತೆಗಳಲ್ಲಿ ಅದೇನೋ ಒಂದು ಅವ್ಯಕ್ತ ಸೆಳೆಯ ನನಗೆ...
ReplyDeleteಚೆನಾಗಿದೆ...ಆಕೃತಿಯೂ ಇಷ್ಟವಾಯಿತು..ಹಾಡುವ ಸಾಲುಗಳು..
ಕುಳಿತಿರುವೆ ಚಹ ಕುಡಿಯಲು
ಗೂಡಂಗಡಿಯ ಎದುರಲಿ ತೋಚದೆ
ಬಹಳ ಹತ್ತಿರ ಎನಿಸಿತು..
ಬರೆಯುತ್ತಿರಿ..
ನಮಸ್ತೆ :)..
ಧನ್ಯವಾದಗಳು
Deletegud1 Vinayak........
ReplyDeletenOvide saalugaLalli, yaaraddo hrudayada maatugaLante bhaasavaayitu....