Saturday, May 31, 2014

|| ಓ ಬೆಳಕೆ ||

ಕರುಣಾಳು ಶಿರವೆರಗಿ
ನಾ ಬೇಡುವೆ
ನೀ ನೀಡು ಕಿರಿದಾದ
ತಿಳಿ ಬೆಳಕನು
ನೀ ಕರುಣಿಸು ಮಿತಿಯಿರುವ
ಕ್ಷೇತ್ರವನ್ನು
ನೀ ದಯಪಾಲಿಸು ಮತ್ತರಳಲು
ಅವಕಾಶವನ್ನು ||

ಸೆರಗೊಡ್ಡಿ ಬೇಡುವೆನು
 ನಂಬಿಕೆ
ಅಳಿಸು ಬಾಲ ಬುದ್ಧಿಯ
ತೋರಿಕೆ
ಉಳಿಸು ಬೆಳವಣಿಗೆಯ
ದೃಢತೆ
ನನ್ನನೇರಿಸು ಎಲ್ಲರಂತೆ
ಸಾಮಾನ್ಯ ಸ್ಥಳಕೆ ||

ನೀನು ಕಿಂಚಿತ್ತಾದರು
ಕೃಪೆದೋರು
ಅಲೆಮಾರಿ ಅಲೆದಾಟದ
ಬದುಕಿಗೆ
ಹೊಡೆದೋಡಿಸು ಮುಸುಕಿರುವ
ಮಬ್ಬನು
ನನ್ನ ಕೈ ಪಿಡಿದು ದಡ
ಸೇರಿಸು ||

ಗೊತ್ತು ಗುರಿಯಿಲ್ಲದ
ಪಯಣದಲಿ
ಮುಚ್ಚಿಡಲು ಗೌಪ್ಯತೆಯು
ಉಳಿದಿಲ್ಲ
ಬಚ್ಚಿಡಲು ಹೊನ್ನನು
ಗಳಿಸಿಲ್ಲ
ಮನವು ಮಣ್ಣು ಮೋಹವ
ಬಯಸದಿರಲು ||

ಕೃಪೆದೋರಿ ನೀ
ಕರುಣಿಸು
ನನ್ನ ಕೈ ಪಿಡಿದು
ನೀ ನಡೆಸು
ಕರುಣೆಯಲಿ ಕಣ್ಣೀರು
ಆರುವುದು
ನಿರ್ದೇಶಿಸು  ಬೆಳಕೆ
ಮುನ್ನಡೆಯಲು ||

3 comments:

  1. " ಉಳಿಸು ಬೆಳವಣಿಗೆಯ
    ದೃಢತೆ"
    ಇದಕಿಂತಲೂ ಬೇಕೆ ವಿನಂತಿ...

    ReplyDelete
  2. ಬೆಳಕು ಬದುಕನ್ನು ಬೆಳಗುವ ಧೀಮಂತ ಶಕ್ತಿ. ಅಲ್ಲಿಯ ಪ್ರಾರ್ಥನೆ ಚೆನ್ನಾಗಿದೆ ವಿನಾಯಕ್.

    ReplyDelete
  3. Karunaalu baa belake musukeeda mabbinali...

    Nimma kavana odi nenapaada geethe idu.
    Naanu stage mele haadida modala geethe koodaa.

    Thumbaa channaagide.

    ReplyDelete