ಪ್ರೀತಿ ಮಾಡಲು ಬರುವುದಿಲ್ಲ
ನನಗೆ
ನೇರ ಮಾತಿನಲಿ ಹೇಳುವುನೆಲ್ಲ
ಕೊನೆಗೆ
ಜನ ಯಾಕೆ ನಂಬ್ತಾರೆ?
ಮುಖಬಿಡ್ಯ ಮಾಡ್ತಾರೆ?
ತಪ್ಪಾದ್ರೆ ತೆಗಳುತಾರೆ
ಸರ್ಯಾದ್ರೆ ಹೊಗಳುತಾರೆ ||
ಒಲವ ಮಾತಿಗೆ ನಂಬಿ
ಕೆಡುವ
ಖದೀಮ ನಾನು
ಎದ್ರಸಿಟ್ಟಲಿ ರೇಗಾಡಿ ಕೆಲವು
ಸ್ನೇಹ
ಕಳೆದುಕೊಂಡವನು
ಮೋಹದ ಮಾತನಾಡಲು
ದೂರಾದ ಗೆಳೆತನವು
ಸ್ವಾರ್ಥಿಯಾಗಿ ಸ್ವಾವಲಂಬಿಯಾಯಿತು
ಜೀವನವು ||
ಊರುರ ಸುತ್ತಿರಲು ಉಪಯದಿ
ಚುರು
ಉಪಕಾರ ಮಾಡಿರಲು
ಸಂಘಟನೆ ಮಾಡುತ ಸಮಾಜದ
ಸಂಗದಲಿ ಬದುಕಿರಲು
ಮಾಡದ ಕೆಲಸಕೆ ಹೇಳಿಸಿಕೊಳ್ಳುವುದು
ಸಜೆಯಿರದ ಶಿಕ್ಷೆಯು ||
ಮುಂಗೋಪದ ರಾಯಭಾರಿಯು
ಕಿಸಲ್ ಮಾತಿನ ಹಲುಬಿಗ
ಕ್ಷಣ ಮಾತ್ರದ ಸಿಟ್ಟಿಗೆ
ಕೊರಗುವ ಮೌನಿ
ಸೌಜನ್ಯದಲಿ ಬೆರೆತು ಹೋರಾಡುವ
ಕ್ಷಮಾರ್ಥಿ ವಿನಯಿ ||
ನನ್ನ ಮಟ್ಟಿಗೆ ಹೊಸ ಪದಗಳು: ಮುಖಬಿಡ್ಯ, ಕಿಸಲ್
ReplyDeleteಒಟ್ಟಾರೆ ಒಳ್ಳೆಯ ಕವನ.