ಸಪೂರಿ ನುಗ್ಗಿ ಚೌಳಿನಲಿ
ಹೊಡೆತ ತಿಂದ
ಆ ದಿನಗಳಲಿ ಹೊಡೆತ
ಕೊಟ್ಟ ಮಾಷ್ಟ್ರು
ಮರೆಯಾಗಿಲ್ಲ ಮನಸಿನ ನೆನಪಿನನಂಗಳದಲ್ಲಿ
ಆಡಿದ ಕಂಬದಾಟದ ಹುರುಪಿನ
ನೆನಪು ||
ಒಂಟಿ ಕಾಲಲಿ ಕುಂಟ್ಲೀಪಿಯಾಡುತ
ಕದ್ದು ಮುಚ್ಚಿ ಕಾಲು
ಬದಲಿಸಿದಾಗ
ತುತಿಯೆಂದು ತಲೆ ಮುಟ್ಟಿ
ಕುಳಿತಾಗ
ಜಿರಿ ಹಾಕಿದಾಗ ಮಾಡಿದ
ಜಗಳದ ನೆನಪು ||
ಉಪಾಧ್ಯಾಯರ ಚರ್ಚೆ ನೆಡೆಯುವಾಗ
ತರಗತಿಯಲಿ ಗಲಾಟೆ ಜೋರಾದಾಗ
ಬೇಕಾಬಿಟ್ಟಿ ತಿಂದ ಹೊಡೆತದ
ನೋವು
ಬೆನ್ನು ಒಡೆದು ರಕ್ತ
ಬಂದ ಕಹಿ ನೆನಪು
||
ಬರದಿದ್ದಾಗ ತಲೆಕೆಟ್ಟು ಕೂತಾಗ
ಪರೀಕ್ಷೆಯಲ್ಲೇನು ಬರೆಯಬೇಕೆಂಬ ಯೋಚನೆ
ಹೊಟ್ಟೆ ಬಟ್ಟೆ ಮೇಲೆ
ಬರೆದು
ಮಾಡಿದ ನಕಲುಗಳ ನಾಚಿಕೆಯ
ನೆನಪು ||
ನಾನಾ ಬಗೆಯ ಹಣ್ಣುಗಳನು
ಕೊಯ್ಯುತ
ಖುಷಿಯಲಿ ಕದ್ದು ತಿಂದು
ತೇಗುವ ಕ್ಷಣಕೆ
ತವರಿಕೊಂಡು ಬಂದ ತೋಟದೊಡೆಯನ
ಕಂಡು
ಕಾಲುಕೀಳುವಾಗ ಕಮ್ಚಡಿಯಾಗಿ ಬಿದ್ದು
ಕದ್ದಿಲ್ಲ ತಿಂದಿಲ್ಲವೆಂದು ಓಡಿದ
ಮರ್ಯಾದಿ ನೆನಪು ||
ಬಾಲ್ಯದ ಹಲವು ಭಾವಗಳ ಈ ನೆನಪಿನ ಸಂಚಯ,
ReplyDeleteನಮ್ಮನ್ನೂ ಬಾಲ್ಯದ ನೆನಪುಗಳೆಡೆಗೆ ಎಳೆದೊಯ್ಯಿತು.
ಧನ್ಯವಾದಗಳು ಸಾರ್.....
Delete