ಆಸೆಯೊಂದು ಚಿಗುರಿತಂದು
ನಿನ್ನ ಮೊಹ ಅರಳಿದಂದು
ನಿನ್ನ ಇರುವು ನನ್ನ ಬರುವು
ಕಾಕತಾಳಿಯವಾದವು
ನಮ್ಮ ಜೀವಗಳು ಬೆರೆಯಲೆಂದು
ಕಾಲ ಕೂಡಿ ಬಂದಿತು ||
ನನ್ನ ನೇರನೋಟಕೆ ನೀ
ಕದ್ದುನೋಡೊ ಓರೆನೋಟ ಬೆರೆಸುತ
ನನ್ನ ಮನವ ಕದ್ದೆ ಅಲ್ಲೆ
ತಿರುಗಿ ದೂರು ನೀಡದಂತೆ
ನನ್ನ ಹೃದಯದಲಿ ನಿನ್ನ ಪ್ರೀತಿ ಬಿತ್ತುತ
ಫಲವ ನೀಡುವಂತೆ ಮಾಡಿದೆ ಹಸಿವನೆಲ್ಲ ನೀಗುಲು ||
ಮುಗುಳುನಗೆಯಲ್ಲೆ ನೀನು
ಸಮ್ಮತಿಯನು ಸೂಚಿಸಿ
ನನ್ನ ಎದೆಗೆ ಕನ್ನ ಹಾಕಿದೆ
ತೊರೆದು ಬದುಕುವ ಯೊಚನೆ ಅಳಿಸಲು
ಮೆಲ್ಲುಸುರಿನ ಗಾಳಿಗೆ ನಂದಾದೀಪ ಹಚ್ಚುತ
ನಂದಾದೀಪ ಬೆಳಗಲು ಭಾಗ್ಯಲಕ್ಷ್ಮೀಯಾಗಿಹೆ ||
No comments:
Post a Comment