Saturday, March 31, 2012

|| ಈಜುವ ಕನಸು ||

ಈಜುವಕಲೆಯನುಕಲಿತೆನುನಾನು..
ಸಾಗರದಾಟುವಆಸೆಯಕಂಡು...
ಶಬ್ದವುಕೇಳಿತುಸಾಗರದಂತ್ಯದಿ..
ನಿಂತಿದ್ದರುಎಲ್ಲರುಮಂಚದಿಂದಬಿದ್ದನನ್ನಎದುರಲಿ.... ||

Friday, March 30, 2012

|| ಕೊನೆಯ ಕವಿತೆ ||

ಕನಸಲಿ ಕಂಡ ಆಸೆಗಳನ್ನು ನನಸಾಗಿಸಲು
ಇಡೇರಿಸ ಬಯಸಿತು ಜೀವನದಂತ್ಯದವರೆಗೂ
ಸ್ವಪ್ನವ ಕಾಣುವ ಅರ್ಹತೆಯಿಲ್ಲವೆ ಬಡಜೀವಕೆ?
ಮನಸಿನ ಬಾವನೆ ಹಂಚಿಕೊಳ್ಳಲು ಸಂಗಾತಿ ಅವಶ್ಯವೇ? ||

ಕನಸನು ಕಾಣುತ ಬದುಕಿದೆ ಜೀವವು ಮೊದಲಿನಿಂದಲೂ
ನೋಡಿತು ಜೀವನದಲ್ಲಿ ಎಲ್ಲ ರೀತಿಯ ಏರಿಳಿತವನ್ನ
ಒಂಟಿ ಜೀವವು ಜಂಟಿಯಾಗಲು ಬಯಸುತ ಅರಸಿದೆ
ಸಿಗದೇ ಹುಡುಕಿತು ಊರೂರ ಮೂಲೆ ಮೂಲೆಗಳನ್ನ ||

ಹೃದಯದ ಮಾತನು ಬರೆಯುತ ಕಳೆಯಿತು
ಜೀವನವಾದರು ಗೆರೆಯೇ ಇಲ್ಲದ ಖಾಲಿ ಕಾಗದ
ಸರಸವೆ ಇಲ್ಲದ ಬದುಕಲಿ ವಿರಸವೂ ಮೂಡದೆ
ಲೇಖನ ಮುಗಿಸಿತು ಲೇಖಿಸಿ ಕೊನೆಯ ಕವಿತೆ ||

Tuesday, March 27, 2012

|| ಮನಸುಗಳು ದೂರ ದೂರ ||

ಸಂತೋಷದಲಿ ಇದ್ದರು ನಗುನಗುತ
ಪರಿಚಯವಾಯಿತು ಅಂತರ್ಜಾಲದಲಿ
ಹೀಗೆ ನಡೆಯಿತು ಸಲ್ಲಾಪ ಸಂಗತಿಗಳು
ಇಬ್ಬರಿಗೂ ವರ್ತನೆಗಳು ಹಿಡಿಸಿದವು ಎದೆಯಾಳದಲಿ ||

ಪರಿಚಯದ ಆಳ ಜಾಸ್ತಿ ಆಗುತ್ತಾಹೋಯಿತು
ದೂರವಾಣಿ ಸಂಖ್ಯೆಗಳನು ವಿನಿಮಯ ಮಾಡುವಷ್ಟು
ಮಾತನಾಡುತ್ತ ಇಬ್ಬರ ಜಾತಿ ಬೇರೆಂದು ತಿಳಿಯಿತು
ಪರಿಚಯ ಪ್ರೀತಿಯಾಯಿತು ಮನಸುಗಳು ಹತ್ತಿರವಾದಷ್ಟು ||

ಇವನ ಕನಸಿನಂತೆ ಅವಳು, ಅವಳ ಕನಸಿನಂತೆ ಇವನು
ಬಾಹ್ಯ ಅಂದಕೆ ಬೆಲೆ ಕೊಡದೆ ಅವರಿಬ್ಬರಾದರು ಹತ್ತಿರ
ಮನಸಿನ ತುಡಿತದಂತೆ ಸ್ವಲ್ಪ ಸಮಯಕೆ ಭೇಟಿಯಾದರು
ಮುಂದೆ ಎದುರಾಗುವ ತೊಂದರೆಯ ಯೋಚಿಸಿ ತತ್ತರ ||

ಅವರಿಬ್ಬರ ನಡುವೆ ನಡೆಯಿತು ಜಾತಿಯ ನರ್ತನ
ಅತೃಪ್ತಿಕರವಾದ ಹುಡುಗಿಕಡೆಯವರ ವರ್ತನೆ
ದೂರಾಗುವುದು ಸತ್ಯವೆಂದು ತಿಳಿದು ದೂರದೂರಿಗೆ ಹೋದರು
ಪರಸ್ಪರ ಶುಭಕಾಮನೆ ಕೋರುತ್ತ ಮನಸುಗಳು ದೂರ ದೂರ ||

||ಅದೃಷ್ಠದಾಟ||

ಕಾಲ ಹೇಗೋ ಕಳೆದರು
ನಾನಾ ರೀತಿ ಮನವ ಕಾಡಿದರು
ತಿಳಿವುದೊಂದೆ ಎಲ್ಲರೆದುರಲಿ
ಅದೃಷ್ಠದಾಟ ನಮ್ಮ ಬಾಳಲಿ ||

ಜನಿಸಿದಾತ ಮಾನವನಾಗಿ ಅದೃಷ್ಠದಿ
ಕಳೆದನವನು ಬಾಲ್ಯವ ಸಂತೋಷದಿ
ಸಮಯ ಚೆನ್ನಾಗಿರಲು ಅವಗೆ
ಮಾಡಿದ್ದೆಲ್ಲ ಅಗುವುದು ಒಳ್ಳೆಯದು ||

ಸೋಲು ಗೆಲುವು ನೋಡದೆ ಮುನ್ನುಗ್ಗಲು
ಸಂದರ್ಭಕ್ಕೆ ತಕ್ಕಂತೆ ಸೌಕರ್ಯ ಸಿಗಲು
ಏನೂ ತೊಡಕು ಎದುರಾಗದೆ ಇದ್ದಾಗ
ಒಡುವುದು ದುರಾದೃಷ್ಠವು ದೂರಾಚೆ ||

ಮನಸ್ಸಿದ್ದರೂ ಮಾಡಲಾಗದೆ ಕೈಕಟ್ಟಿಕೂತಾಗ
ಮೆಚ್ಚದ ವರ್ತನೆಯನ್ನು ಸ್ವಾಗತಿಸಿದಾಗ
ಪರಿಸ್ಥಿತಿ ತಿಳಿದಿದ್ದರೂ ತಿಳಿಯದಂತೆ ವರ್ತಿಸಿ
ಸಹಕರಿಸುವ ಕೈಗಳಿದ್ದರೂ ಸಹಕಾರ ದೊರೆಯದೇ
ದುರಾದೃಷ್ಠದ ಬೇಗೆಯಲ್ಲಿ ಅದೃಷ್ಠದಾಟ ನಡೆವುದು ||

Saturday, January 21, 2012

|| ದೇವನ ಅವತಾರ ||

ದೇಹದ ನೋವಿಗೆ ಹೇಳುವ ಮಾತೋಂದೇ
ಅಚ್ಚರಿ ಉದ್ವೇಗ ತಿಳಿಸುವ ಮಾತೋಂದೇ
ಸಂಕಟ ಆದಾಗ ಹೇಳುವೆವು ನಾವು ಅಮ್ಮಾ ಎಂದು
ಆ ಅಮ್ಮನ ಮಡಿಲಲಿ ಕೂಸಾಗಿ ಇರಬೇಕು ಎಂದೆಂದು ||

ಮಗುವಿಗೆ ಜನ್ಮವ ನೀಡುವಳು ನವಮಾಸ ನರಳಿ
ಕಂದನ ಬೆಳೆಸುವ ಖು‍ಷಿಯಲಿ ದಿನವೇ ಉರುಳಿ
ತನ್ನನು ತಾನು ಮರೆವಳು ಆ ಮಗುವಿನ ನಗೆಯಲಿ
ಹೆತ್ತು, ಹೊತ್ತು ಸಲುಹುವಳು ಸಂತೋಷದಲಿ ||

ಕಣ್ಣಿಗೆ ಕಾಣುವ ದೈವವು ಇವಳೇನೆ
ಲೋಕದ ಬಗ್ಗೆ ಅರಿವು ಮೂಡಿಸೋ ಗುರುವು ಇವಳೇನೆ
ಆ ದೇವನ ಕೆಲಸವ ಕಡಿತ ಗೊಳಿಸುವ
ಅವತಾರವೇ ಈ ನಮ್ಮ ತಾಯಿ ||

ಉಪ್ಪಿಗಿಂತ ರುಚಿಯೂ ಇಲ್ಲ, ತಾಯಿಗಿಂತ ಬಂಧುವೂ ಇಲ್ಲ
ಈ ಅಮ್ಮನ ಆಸರೆಯಲಿ ನೋವೆ ಇಲ್ಲ
ಪ್ರೀತಿಯ ಅಮ್ಮನ ಹೋಲಿಕೆಯು ನುಡಿಯುವ ಬಾಯಿಗೆ
ದೇಶಕ್ಕೆ ಸತ್ಪ್ರಜೆಯನು ನೀಡುವ ತವಕವು ತಾಯಿಗೆ ||

Monday, June 13, 2011

|| ಸಂಬಂಧವೋ...ಅನುಬಂಧವೋ...?||


ಯಾವುದು ಸಂಬಂಧವು..?
ಯಾವುದೋ ಅನುಬಂಧವು..?
ಒಲವಿನ ತುಡಿತದ ಸಂಘಕೆ
ಮಿಡಿಯುವ ಬಾವನೆ ಬಂಧವೋ..?

ದೇಹದ ತುಂಬ ಬಹುಪಾಲು ನೀರು
ಹರಿವುದು ರಕ್ತವು ದೇಹದ ಗಾಯಕೆ
ಹೃದಯದ ತುಂಬ ತುಂಬಿದೆ ರಕ್ತವು
ಬರುವುದು ಕಣ್ಣೀರು ಹೃದಯದ ನೋವಿಗೆ
ಇದು ಯಾವ ರೀತಿಯ ಸಂಬಂಧ
ದೇಹ ಹೃದಯಗಳ ಅನುಬಂಧ...||

ವಸಂತ ಮಾಸದಿ ಮಾವು ಚಿಗುರಲು
ಕೋಗಿಲೆ ಗಾನವು ಬಲುಚೆಂದ
ನಿಸರ್ಗ ವಿಸ್ಮಯ ಕಂಡಿರಲು
ಅರಿವುದು ಬಾವನೆ ಬಂಧವು
ಇದು ಯಾವ ರೀತಿಯ ಸಂಬಂಧ
ಜೀವಿ ಪ್ರಕೃತಿಗಳ ಅನುಬಂಧ...||

ತಾವರೆ ಅರಳದು ಸೂರ್ಯನ ನೋಡದ ವಿನಃ
ನೈದಿಲೆ ನಲಿವುದು ಚಂದ್ರನು ಬಂದಾಗ ಪುನಃ
ಬೆಳಕು ಕತ್ತಲಲಿ ನಡೆವುದು ಹೂಗಳ ನರ್ತನ
ಪರಿಸರದ ತುಂಬೆಲ್ಲ ಪರಿಮಳ ಘಮ ಘಮ
ಇದು ಯಾವ ರೀತಿಯ ಸಂಬಂಧ
ಹೂವು ಹಗಲಿರುಳುಗಳ ಅನುಬಂಧ...||

Sunday, June 12, 2011

|| ಇದೇನಾ ಪ್ರೀತಿ....? ||

 
ನನ್ನ ಮನದಲಿ ಮೂಡಿದ ಗೊಂದಲಕೆ
ನೀ ಉತ್ತರಿಸುವೆಯೇನು..?
ಒಂದು ಮೊಗವನು ನೋಡಿದ ತಕ್ಷಣಕೆ
ಪ್ರೀತಿ ಹುಟ್ಟುವುದು ಹೇಗೆ ನೀ ಹೇಳು...?
ಗೊಂದಲಕೆ ಉತ್ತರವೇ ಪ್ರೀತಿಯೇನು...?

ಮುದ್ದು ಮನಸು ಬಯಸಿರುವ
ಹೃದಯ ನೆನೆದಿರುವ
ಕಲ್ಪನೆಯ ರೂಪವನು ಎದುರಲಿ ಕಂಡಾಗ
ಹುಟ್ಟುವ ಒಲವೇ ಪ್ರೀತಿಯೇನು...?

ಎರಡು ಹೃದಯದ ಕಾಮನೆಯು
ಒಂದೇ ದಾರಿಯ ಹೊಂದಿರಲು
ಜೀವನ ಮೌಲ್ಯವ ಅರ್ಥೈಸುತ
ಪರಸ್ಪರ ಬೆಸೆಯುವ ಬೆಸುಗೆಯೇ ಪ್ರೀತಿಯೇನು...?

ಸುಂದರ ರೂಪವ ಕಂಡಾಗ
ಕಣ್ಣೋಟಕೆ ಕಣ್ಣೋಟ ಬೆರೆತಾಗ
ಸೇರುವವು ದೇಹಗಳು ಆಕರ್ಷಣೆಯಲಿ
ಆಗ ಸ್ಪರ್ಷಿಸುವ ಕಾಮವೇ ಪ್ರೀತಿಯೇನು...?

ಅರಿಯದೆ ಬದುಕುತ
ಎದೆಯೊಳಗಿನ ಸ್ವಾರ್ಥವ
ಈಡೇರಿಸಿಕೊಳ್ಳಲು ಹೊಂದಿರುವ ಮಾರ್ಗದ
ಸಂಕ್ಷಿಪ್ತ ರೂಪದ ಶಬ್ಧವೇ ಪ್ರೀತಿಯೇನು...?