Friday, March 30, 2012

|| ಕೊನೆಯ ಕವಿತೆ ||

ಕನಸಲಿ ಕಂಡ ಆಸೆಗಳನ್ನು ನನಸಾಗಿಸಲು
ಇಡೇರಿಸ ಬಯಸಿತು ಜೀವನದಂತ್ಯದವರೆಗೂ
ಸ್ವಪ್ನವ ಕಾಣುವ ಅರ್ಹತೆಯಿಲ್ಲವೆ ಬಡಜೀವಕೆ?
ಮನಸಿನ ಬಾವನೆ ಹಂಚಿಕೊಳ್ಳಲು ಸಂಗಾತಿ ಅವಶ್ಯವೇ? ||

ಕನಸನು ಕಾಣುತ ಬದುಕಿದೆ ಜೀವವು ಮೊದಲಿನಿಂದಲೂ
ನೋಡಿತು ಜೀವನದಲ್ಲಿ ಎಲ್ಲ ರೀತಿಯ ಏರಿಳಿತವನ್ನ
ಒಂಟಿ ಜೀವವು ಜಂಟಿಯಾಗಲು ಬಯಸುತ ಅರಸಿದೆ
ಸಿಗದೇ ಹುಡುಕಿತು ಊರೂರ ಮೂಲೆ ಮೂಲೆಗಳನ್ನ ||

ಹೃದಯದ ಮಾತನು ಬರೆಯುತ ಕಳೆಯಿತು
ಜೀವನವಾದರು ಗೆರೆಯೇ ಇಲ್ಲದ ಖಾಲಿ ಕಾಗದ
ಸರಸವೆ ಇಲ್ಲದ ಬದುಕಲಿ ವಿರಸವೂ ಮೂಡದೆ
ಲೇಖನ ಮುಗಿಸಿತು ಲೇಖಿಸಿ ಕೊನೆಯ ಕವಿತೆ ||

1 comment:

  1. "ಸರಸವೆ ಇಲ್ಲದ ಬದುಕಲಿ ವಿರಸವೂ ಮೂಡದೆ
    ಲೇಖನ ಮುಗಿಸಿತು ಲೇಖಿಸಿ ಕೊನೆಯ ಕವಿತೆ" ಚೆನ್ನಾಗಿದೆ. ಮುಂದುವರೆಸಿ.. :)

    ReplyDelete