Tuesday, March 27, 2012

|| ಮನಸುಗಳು ದೂರ ದೂರ ||

ಸಂತೋಷದಲಿ ಇದ್ದರು ನಗುನಗುತ
ಪರಿಚಯವಾಯಿತು ಅಂತರ್ಜಾಲದಲಿ
ಹೀಗೆ ನಡೆಯಿತು ಸಲ್ಲಾಪ ಸಂಗತಿಗಳು
ಇಬ್ಬರಿಗೂ ವರ್ತನೆಗಳು ಹಿಡಿಸಿದವು ಎದೆಯಾಳದಲಿ ||

ಪರಿಚಯದ ಆಳ ಜಾಸ್ತಿ ಆಗುತ್ತಾಹೋಯಿತು
ದೂರವಾಣಿ ಸಂಖ್ಯೆಗಳನು ವಿನಿಮಯ ಮಾಡುವಷ್ಟು
ಮಾತನಾಡುತ್ತ ಇಬ್ಬರ ಜಾತಿ ಬೇರೆಂದು ತಿಳಿಯಿತು
ಪರಿಚಯ ಪ್ರೀತಿಯಾಯಿತು ಮನಸುಗಳು ಹತ್ತಿರವಾದಷ್ಟು ||

ಇವನ ಕನಸಿನಂತೆ ಅವಳು, ಅವಳ ಕನಸಿನಂತೆ ಇವನು
ಬಾಹ್ಯ ಅಂದಕೆ ಬೆಲೆ ಕೊಡದೆ ಅವರಿಬ್ಬರಾದರು ಹತ್ತಿರ
ಮನಸಿನ ತುಡಿತದಂತೆ ಸ್ವಲ್ಪ ಸಮಯಕೆ ಭೇಟಿಯಾದರು
ಮುಂದೆ ಎದುರಾಗುವ ತೊಂದರೆಯ ಯೋಚಿಸಿ ತತ್ತರ ||

ಅವರಿಬ್ಬರ ನಡುವೆ ನಡೆಯಿತು ಜಾತಿಯ ನರ್ತನ
ಅತೃಪ್ತಿಕರವಾದ ಹುಡುಗಿಕಡೆಯವರ ವರ್ತನೆ
ದೂರಾಗುವುದು ಸತ್ಯವೆಂದು ತಿಳಿದು ದೂರದೂರಿಗೆ ಹೋದರು
ಪರಸ್ಪರ ಶುಭಕಾಮನೆ ಕೋರುತ್ತ ಮನಸುಗಳು ದೂರ ದೂರ ||

4 comments: