Wednesday, October 22, 2014

ಆಸೆ ಭರವಸೆ

ದಿನವೆಲ್ಲ ಕಾಣಲಿ ತುಂಬಿರುವ ಬೆಳಕಿನಲಿ
ಎಣ್ಣೆ ತುಂಬಿ ಹೊತ್ತಿಸಿದ ಹಣತೆಯು
ನಂದಾದೀಪವಾಗಲೆಂಬ ಬಯಕೆಯು
ಸೂರ್ಯ ಅಡಗಿದರು ಬೆಳಗುತಿರಲಿ

ಕಾರ್ತಿಕ ಮಾಸದಲಿ ಬರವಿಲ್ಲ ಬೆಳಕಿಗೆ
ಅಂತಹುದೆ ಬೆಳಕು ತುಂಬಿರಲಿ ಬದುಕಿಗೆ
ಕತ್ತಲು ಕವಿಯದಂತೆ ಪ್ರಜ್ವಲಿಸಲಿ ಜೀವನ
ಪೂಜಿಸಿ ನಂಬಿಹೆನು ಬಾಳಾಗಲಿ ಪಾವನ

1 comment:

  1. ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು. ...

    ಬಾಳೆಲ್ಲ ತಮಗೆ ಕಾರ್ತೀಕವೇ ಆಗಲಿ, ನಂದಾದೀಪವಾಗಲಿ ಅನುಕ್ಷಣ.

    ಆರನೀಕುಮಾ ಈ ದೀಪಂ
    ಪಾರ್ತೀಕ ದೀಪಂ...

    ReplyDelete