Thursday, October 16, 2014

ಹನಿ ಕಂಬನಿ

ಮೋಡಗಳ ಘರ್ಷಣೆಯು
ಗಗನದಲಿ
ಮಿಂಚು ಗುಡುಗಿನ ಜನನವು
ಜಗಳಕ್ಕೆ ಕೊನೆಯುಂಟು
ಮಳೆಯಲಿ

ಭಾವನೆಗಳ ಕಡೆತವು
ಮನದಾಳದಲಿ
ಕೋಪತಾಪದ ಹುಟ್ಟು
ಮಿಡಿತಗಳಿಗೆ ಅಂತ್ಯವುಂಟು
ಕಂಬನಿಯಲಿ

1 comment:

  1. ಮಳೆ ಮತ್ತು ಕಂಬನಿಗಳ ಹೋಲಿಕೆ ಸೊಗಸಾಗಿದೆ.

    ReplyDelete