ಕಳೆದ ಘಳಿಗೆಯ
ಅರಿವ ಸಮಯ
ಕೇಳಿದ ಮಾತುಗಳೆಲ್ಲ
ನಿಜದ ಕೂಸುಗಳಲ್ಲ
ಹೀಗೆ ಇತ್ತು ವಿಷಯದಲ್ಲಿ
ಏನೋ ಆಯ್ತು ಬದುಕಿನಲ್ಲಿ
ಅದನು ನೀನು ನಂಬುವ ಮೊದಲೆ
ನಿರ್ಣಯದ ಹೆಜ್ಜೆಗಳು ಸಲ್ಲದು...
ಕ್ರಿಯೆಯ ಕತೃವು ಯಾರಾದರೇನು
ಕಾರ್ಯಕೆ ಕಾರಣವು ಬೇರೆ ಇರಲು
ಮಾಡಿದ ಕೈಗಳಾವುದೋ
ಬಿಂಬಿಸುವ ಹೆಸರು ಇನ್ಯಾರದೋ
ಕೂಲಂಕುಶವಾಗಿ ತಿಳಿಯಲು
ಸತ್ಯದನಾವರಣ ಆಗುವುದು...
ಯಾರೋ ಮಾಡುವ ಕೆಲಸದಲ್ಲಿ
ಮಧ್ಯ ಬರುವರು ಬೇರೆ ಯಾರೋ
ಮಾಡದ ಚಟುವಟಿಕೆಯಲಿ
ತೇಲುವ ಗಾಳಿಮಾತಿನಲಿ
ಬರುವ ಹೆಸರಿನ ಹಿಂದೆ ಇರುವುದು
ಗುರುತಿಗೆ ಕಾಣದ ಅರ್ಧ ಸತ್ಯವು...
ಅರಿವ ಸಮಯ
ಕೇಳಿದ ಮಾತುಗಳೆಲ್ಲ
ನಿಜದ ಕೂಸುಗಳಲ್ಲ
ಹೀಗೆ ಇತ್ತು ವಿಷಯದಲ್ಲಿ
ಏನೋ ಆಯ್ತು ಬದುಕಿನಲ್ಲಿ
ಅದನು ನೀನು ನಂಬುವ ಮೊದಲೆ
ನಿರ್ಣಯದ ಹೆಜ್ಜೆಗಳು ಸಲ್ಲದು...
ಕ್ರಿಯೆಯ ಕತೃವು ಯಾರಾದರೇನು
ಕಾರ್ಯಕೆ ಕಾರಣವು ಬೇರೆ ಇರಲು
ಮಾಡಿದ ಕೈಗಳಾವುದೋ
ಬಿಂಬಿಸುವ ಹೆಸರು ಇನ್ಯಾರದೋ
ಕೂಲಂಕುಶವಾಗಿ ತಿಳಿಯಲು
ಸತ್ಯದನಾವರಣ ಆಗುವುದು...
ಯಾರೋ ಮಾಡುವ ಕೆಲಸದಲ್ಲಿ
ಮಧ್ಯ ಬರುವರು ಬೇರೆ ಯಾರೋ
ಮಾಡದ ಚಟುವಟಿಕೆಯಲಿ
ತೇಲುವ ಗಾಳಿಮಾತಿನಲಿ
ಬರುವ ಹೆಸರಿನ ಹಿಂದೆ ಇರುವುದು
ಗುರುತಿಗೆ ಕಾಣದ ಅರ್ಧ ಸತ್ಯವು...
ಪೂರ್ಣ ಸತ್ಯ ಯಾವತ್ತೂ ತೋರಗೊಡದು. ಬರೀ ಇಂತಹವೇ ಎಲ್ಲ ಕಡೆ!
ReplyDelete