1)ನೀರಲ್ಲಿ... 2)ಮನೆಯಲ್ಲಿ... 3)ಜೇಬಿನಲ್ಲಿ...
ಈಜುವೆನು ಅಡ್ಡಿಯಾಗಿರಲು ಹಣದಕಂತೆ
ಗಾಳಿಯಲ್ಲಿ... ಪ್ರೀತಿಯಲ್ಲಿ... ಬೀಗದಲ್ಲಿ...
ತೇಲುವೆನು ಸಂಶಯಬಂದಿರಲು ಆಸ್ತಿಗಳಿಕೆ
ಮುನಿಸಲ್ಲಿ... ಮೌನದಲಿ... ಯಾಕಿಲ್ಲ...
ಮುದುಡುವೆನು ಒಂಟಿಯಾಗಿರಲು ಅರಿವ
ಮನಸು
ಸೊಗಸಲ್ಲಿ... ಕನಸೆಲ್ಲಿ... ಬೇಕಲ್ಲ...
ಸಿಹಿಯಾಗುವೆನು ಜೊತೆಯಾಗಿರಲು ಬಾಳೋಕೆ
ನೀಯತ್ತು
ಮನದ
ಭಾವ ಬೆರೆತಾಗ ಅವನು
ಬಳಿಗೆ ಬಂದಾಗ ಅಸ್ತಿ
ಗಿಸ್ತಿ ಅಂದಾಗ
ಕಿಡಿಯು
ಕಿಚ್ಚಾಗಿ ಉರಿದಾಗ ದೂರ ಅಗೋ ಮಾತೇಕೆ? ಜಾತಿ
ಗೀತಿ ಬಂದಾಗ
ಮಾತು
ಮುದುಡಿ ಮೌನ. ಅವಳು ದೂರ ನಿಂತಾಗ ವಿರಸ
ವಿರಹದ ಮೌನ.
ಬಯಸೋ
ಮನಸು ನಿನಗೇಕೆ?
ಅದುವೆ
ವಿಧಿಯ ಆಟ.
ನಿಜವು
ಎಂಬ ಸತ್ಯವನು ಮರೆಯೋದಲ್ಲ
ದಾರದಲ್ಲಿ
ಸಾಯೋದಲ್ಲ
ಜಗಳಾಟ
ಆಡೋದಲ್ಲ
ಕಣ್ಣೀರು
ಹಾಕೋದಲ್ಲ
ಸಪ್ಪೆಯಾಗಿ
ಸವೆಯೋದಲ್ಲ
ಹಗೆಯನು
ಮಾಡೋದಲ್ಲ
ಜೀವ
ಮಿಡಿತ ಅರಿಯೇ ಬದುಕು.
ಕಿರುಚಿ
ಕೂಗಿ ಮನಸನು ಮುರಿಯೋದೇಕೆ?
ಕನಸುಗಳ ಕದಡೋದೇಕೆ?
ಒಂಟಿಯಾಗಿ
ಬಾಳೋದೇಕೆ?
ಒಲವನು
ಒಡೆಯೋದೇಕೆ?
ಮೋಸವನು
ಮಾಡೋದೇಕೆ?
ಅರ್ಥವಾದ
ಜೀವನವೆ ಸಾಕೆ?
ನಂಬಿ
ಬರುವ ಜೀವವೇ ಬದುಕು.
ತಮ್ಮ ಈ ಸಾಲು ಇಡೀ ಕವನದ ಸಾರಾಂಶದಂತೆ ಕಂಗೊಳಿಸುತಿದೆ:
ReplyDelete'ಜೀವ ಮಿಡಿತ ಅರಿಯೇ ಬದುಕು'