ಯಾತಕೆ ಈ ಸಂಜೆಯಲಿ
ಏಕಾಂತವು ಕಾಡುತಿದೆ
ನನ್ನ ಮನವು ಬೇಸರಿಸುತ
ನಿನ್ನ ಸಾಂಗತ್ಯ ಬಯಸುತಿದೆ
ನಗುವಿಲ್ಲದೆ ಮಾತಿಲ್ಲದೆ
ವಿಬ್ರಾಂತದಲಿ ಈ ಜೀವ ಬಳಲುತಿದೆ ||
ಈ ಮಬ್ಬಿನ ತಿಳಿ ಬೆಳಕಲಿ
ಬಣ್ಣಗಳು ಹರಡುತಿದೆ ಕಿರಣದಲಿ
ಆಯಾಸವ ಹೊರಹಾಕಲು ನಲಿದಾಡುತ
ಕೈ ಹಿಡಿದು ಜೊತೆಯಾಗಿವೆ ಜೋಡಿ ಜೀವಗಳು
ಶಬ್ಧಗಳು ಮರೆಯಾಗುತ ಸ್ತಬ್ಧವಾಗುತಿಹುದು
ಮೌನವಾವರಿಸುತಿಹುದು ನೀನಿಲ್ಲದ ಏಕಾಂತದಲಿ ||
No comments:
Post a Comment