ದೀನ ನಾನು ದಾನಿ ನೀನು
ಮೋಕ್ಷವನ್ನು ನೀಡೆಯಾ
ಭಜಿಪ ಭಕ್ತರ ಪೊರೆವ ನಿನ್ನಯ
ಬಣ್ಣಿಸಲಾಗದು ಮಹಿಮೆಯ ||
ಸೋತ ಘಳಿಗೆ ಅಡಗಿ ಅಜ್ನಾತದಿ
ಧ್ಯಾನಿಸಿ ಮರಳಿ ಬಂದಿರಲು ಭಯದಿ
ಅಭಿನಂದಿಸಲು ಕಾದಿಹರೆಲ್ಲರ ನೋಡಿ
ನಿನ್ನ ಕರುಣೆಯ ಪಸರಿಸುವೆ ಜನರ ಕೂಡಿ ||
ನೀರ ಮೇಲಿನ ಗುಳ್ಳೆಯ ನಂಬಿ
ಮನೆಯ ಕಟ್ಟಿರಲು ಭದ್ರತೆಗೆ ಕಂಬಿ
ಗುಳ್ಳೆ ಒಡೆದು ಮನೆಯು ಉರುಳಿತು
ತೇಲಲು ತೆಪ್ಪ ಕಳುಹಿಸಿದೆ ಬದುಕಿಸಲು ||
ಹಲವು ಬಗೆಯಲಿ ಜಗವು ಕಾಡಿರಲು
ಹೇಗೆ ಬದುಕಲಿ ಕಲ್ಮಶವೇ ಉಸಿರಲು
ನಿನ್ನ ಭಜನೆ ನಿರತ ಮಾಡಿರಲು
ಉಸಿರಿಲ್ಲದೆ ಬದುಕುವಂತೆ ಹರಸಿದೆ ||
ಎಲ್ಲ ಹಂತದಲು ಪ್ರತಿ ಕ್ಷಣದಲು
ಸಾಯದಂತೆ ಈ ಜೀವವ ಕಾದಿದೆ
ತಂದೆ ಶರಣು ನರಹರಿ ನಾರಾಯಣ
ಆಶೀರ್ವದಿಸು ನೀಚನಾಗದಂತೆ ನನ್ನನು ||
No comments:
Post a Comment