ಬಾನಿನಲಿ ಬೆಳದಿಂಗಳಿಲ್ಲ
ಹಣತೆಯಲಿ ಉರಿದೀಪವಿಲ್ಲ
ಹಾಗಾದರು ನಿನ್ನಂದ ಬೆಳಗುತಿಹುದು
ಕಾರಣವು ಅಡಗಿರುವ ಆ ಚಂದಿರನು
ಹಣತೆಯಲಿ ನಂದಾದೀಪವಾಗಿಹನು ||
ನಿನ್ನಂದ ನೋಡಲು ನಿನ್ನೋಂದಿಗೆ ಸಾಗಲು
ಉರಿಯನು ನೀಗಲು ತುಸು ಛಳಿಯನು ನೀಡಲು
ಹಣತೆಯಲಿ ಅಡಗಿಹನು ಆ ಚಂದಿರನು
ನನ ಪ್ರೀತಿಗೆ ಸ್ಪೂರ್ತಿಯು ನಿನ್ನಂದವು
ಅದಕೊಡೆಯನಾಗಲು ನಾನು ಬಲುಚಂದವು ||
ಪ್ರತಿ ರಾತ್ರಿ ಕನಸಿನಲಿ ನಿದ್ದೆಯನು ಕೆಡಿಸುತಲಿ
ಮನಸಾರೆ ಬಯಸುತಲಿ ಗಮನವ ಸೆಳೆದಿಹಳು
ಕರಿಮಚ್ಚೆ ಎಡಬದಿಯಲಿ ಕೆಂದುಟಿಯ ಪಕ್ಕದಲಿ
ಮರೆಮಾಚುತ ದ್ರಷ್ಠಿಯನು ಅದೃಷ್ಠವೆ ತುಂಬಿಹುದು
ಮನದೊಡತಿ ಶಶಿ ಪ್ರೇಯಸಿ ನನ್ನವಳಾಗಿರುವಳು ||
No comments:
Post a Comment